ಸೋಮವಾರಪೇಟೆ ಡಿ.7 NEWS DESK : ಮಧ್ಯಪ್ರದೇಶದಲ್ಲಿ ನಡೆದ 68ನೇ ರಾಷ್ಟ್ರಮಟ್ಟದ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಪೊನ್ನಂಪೇಟೆ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿನಿ ಎಂ.ಎಂ.ತಾನಿಯಾ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾಳೆ. ಕೆಪಿಎಸ್ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಎಂ.ಎಂ.ತಾನಿಯಾ, ಸೋಮವಾರಪೇಟೆ ಚೌಡ್ಲು ಗ್ರಾಮದ ನಿವಾಸಿ ಮಹಮ್ಮದ್ ಅಸ್ಲಾಂ ಹಾಗೂ ಅಸ್ಮಾ ಭಾನು ದಂಪತಿದ ಪುತ್ರಿ. ಇವಳಿಗೆ ಕುಪ್ಪಂಡ ಸುಬ್ಬಯ್ಯ, ಮೂಕಳಮಾಡ ಗಣಪತಿ ತರಬೇತಿ ನೀಡಿದ್ದು, ಡ್ಯಾನಿ ಈರಪ್ಪ ಅವರು ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದಾರೆ.