ಮಡಿಕೇರಿ ಡಿ.7 NEWS DESK : ಕೊಡಗಿನ ಬಲ್ಯಮೀದೇರಿರ ಧೃತಿಗೆ ಕನ್ನಡ ವಿಕಾಸ ರತ್ನ ಪ್ರಶಸ್ತಿ ಲಭಿಸಿದೆ. ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ ಭವನದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆದ ಕನ್ನಡ ಹಬ್ಬ ಆಚರಣೆಯಲ್ಲಿ ಸಾಹಿತಿ ಟಿ. ಸತೀಶ್ ಜವರೇಗೌಡ ಹಾಗೂ ಮೈಸೂರಿನ ಕ.ರಾ.ಒ.ವಿ ವೇದಿಕೆ ರಾಜ್ಯಾಧ್ಯಕ್ಷ ಚ್.ಎಲ್.ಯಮುನಾ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಟಿ. ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆಯ 9ನೇ ತರಗತಿ ವಿಧ್ಯಾರ್ಥಿನಿಯಾದ ಧೃತಿ ಬಲ್ಯಮೀದೇರಿರ ಬಿ.ಎಂ. ಪೆಮ್ಮಯ್ಯ ಹಾಗೂ ಶಬಾನ ದೇಚಮ್ಮ ದಂಪತಿಯ ಪುತ್ರಿ.