ಮಡಿಕೇರಿ ಡಿ.14 NEWS DESK : ಪುತ್ತರಿ ಹಬ್ಬದ ಪ್ರಯುಕ್ತ ಚೆಟ್ಟಳ್ಳಿಯ ಶ್ರೀಮಂಗಲ ಶ್ರೀಭಗವತಿ ದೇವಾಲಯದಲ್ಲಿ ಪುತ್ತರಿ ಧಾರೆ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದ ಕ್ಷೇತ್ರಪಾಲಕ, ನಾಗ, ಗಣಪತಿ ಪೂಜೆ ಸಲ್ಲಿಸಿ ಶ್ರೀ ಭಗವತಿ ದೇವಿಗೆ ಊರಿನವರ ಸಮ್ಮುಖದಲ್ಲಿ ಅರ್ಚಕಾರದ ರಾಧಾಕೃಷ್ಣ ಭಟ್ ವಿಶೇಷ ಪೂಜೆ ಸಲ್ಲಿಸಿದರು. ಕುಲದೇವರಾದ ಇಗ್ಗುತ್ತಪ್ಪ ನೆಲೆಯಲ್ಲಿ ಪುತ್ತರಿ ಹಬ್ಬ ಕಟ್ಟಿನ ನಿಯಮದಂತೆ ಎಲ್ಲೆಡೆ ಪುತ್ತರಿ ಆಚರಣೆ ನಡೆಯಲಿದೆ. ಧಾನ್ಯಲಕ್ಷ್ಮಿಯನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳುವ ಮೂಲಕ ದೇವರು ಎಲ್ಲರಿಗೂ ಒಳಿತನ್ನು ಮಾಡಲೆಂದು ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕ್ಯಾ.ಮುಳ್ಳಂಡ ಪ್ರಭಕ ತಿಮ್ಮಯ್ಯ ಬೇಡಿಕೊಂಡರು. ಮಹಾಪೂಜೆಯ ನಂತರ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಿತು.