ಗೋಣಿಕೊಪ್ಪಲು NEWS DESK ಡಿ.19 : ಗೋಣಿಕೊಪ್ಪಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಸ್ಮರಣ ಸಂಚಿಕೆ ಹೊರತರಲು ನಿರ್ಧರಿಸಿದ್ದು, ಹಳೆಯ ವಿದ್ಯಾರ್ಥಿಗಳಿಂದ ಲೇಖನಗಳನ್ನು ಶತಮಾನೋತ್ಸವ ಸ್ಮರಣ ಸಂಚಿಕೆ ಸಮಿತಿ ಆಹ್ವಾನಿಸಿದೆ. ಶಾಲೆಯ ಆವರಣದಲ್ಲಿ ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.
ಸ್ಮರಣ ಸಂಚಿಕೆ ಸುಮಾರು 300 ಪುಟಗಳನ್ನು ಹೊಂದಿರುತ್ತದೆ. ಶಾಲೆಗೆ ಸಂಬoಧಿಸಿದ ಚಿತ್ರಗಳು ಮತ್ತು ಶತಮಾನೋತ್ಸವ ಆಚರಣೆಯ ಚಿತ್ರಗಳು ಸೇರಿದಂತೆ ಶಾಲೆ ನಡೆದು ಬಂದ ಐತಿಹಾಸಿಕ ಲೇಖನಗಳು, ರಾಜ್ಯಪಾಲರು ಮುಖ್ಯಮಂತ್ರಿಗಳು, ಶಾಸಕರು, ಸಚಿವರು, ಉಸ್ತುವರಿ ಸಚಿವರುಗಳ, ಶುಭ ಸಂದೇಶಗಳು, ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಬರಹಗಳು ದಾಖಲಾಗುತ್ತವೆ. ಜತೆಗೆ ಹಳೆ, ಹಿರಿಯ ವಿದ್ಯಾರ್ಥಿಗಳಿಂದ ಲೇಖನಗಳನ್ನು ಸಹ ಪುಸ್ತಕದಲ್ಲಿ ಅಳವಡಿಸಲಾಗುವುದು. ಹಳೆಯ ವಿದ್ಯಾರ್ಥಿಗಳು 200 ಶಬ್ದಕ್ಕೆ ಮೀರದಂತೆ ವೈಚಾರಿಕ, ಸಾಮಾಜಿಕ, ಶೈಕ್ಷಣಿಕ ಲೇಖನಗಳನ್ನು, ಕಥೆ, ಕವನಗಳನ್ನು ಕಳುಹಿಸಬಹುದಾಗಿದೆ. ಲೇಖನಗಳನ್ನ ಡಿಸೆಂಬರ್ 31ರ ಒಳಗೆ ಕಳುಹಿಸಿಕೊಡಲು ಸಮಿತಿ ಮನವಿ ಮಾಡಿದೆ. ಲೇಖನಗಳನ್ನು ಮುಖ್ಯಪ್ರಾಧ್ಯಾಯರು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಗೋಣಿಕೊಪ್ಪ ಈ ವಿಳಾಸಕ್ಕೆ ಅಂಚೆ ಮೂಲಕ ಕಳಿಸಬಹುದು ಅಥವಾ 9259950459 ವಾಟ್ಸಾಪ್ ಸಂಖ್ಯೆಗೆ ಲೇಖನಗಳನ್ನು ಕಳುಹಿಸಬಹುದು ಎಂದು ತಿಳಿಸಿದ್ದಾರೆ.
ಶತಮಾನೋತ್ಸವ ಸಮಿತಿಯ ಕಾರ್ಯಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಯ ಸದಸ್ಯರುಗಳಾದ ಬಿ ಎನ್ ಪ್ರಕಾಶ್, ಮನೆಯಪಂಡ ಗಣಪತಿ ಮೋತಿ, ಚಂದನ ಡಿ ಮಂಜುನಾಥ್, ಎಂ ಮಂಜುಳಾ, ದೇವರಾಜು ಬಿ.ಟಿ, ಎಗ್ನೆಸ್, ಬಿ.ಆರ್ ಸತೀಷ್, ದಮಯಂತಿ, ಜಯಶ್ರೀ, ಜಗದೀಶ್ ಜೋಡುಬೀಟಿ ಇದ್ದರು.
Breaking News
- *ಕುವೇಂಡ ಹಂಝತುಲ್ಲಾರಿಗೆ ದುಬೈನಲ್ಲಿ ಸನ್ಮಾನ*
- *ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ಸಹಸ್ರ ಕಾರ್ತಿಕ ದೀಪೋತ್ಸವ : ಮಠ ಮಾನ್ಯಗಳಿಂದ ಮಾತ್ರ ದೇಶದ ಸಂಸ್ಕೃತಿ ಉಳಿಯಲು ಸಾಧ್ಯ : ಎಂ.ಪಿ.ಅಪ್ಪಚ್ಚು ರಂಜನ್*
- *ರೈತರ ಹೋರಾಟಕ್ಕೆ ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಬೆಂಬಲ*
- *ಮೀನುಗಾರಿಕೆ : ಡಿಜಿಟಲ್ ವೇದಿಕೆಯಲ್ಲಿ ನೋಂದಣಿ ಮಾಡಲು ಮನವಿ*
- *ಕೆದಮುಳ್ಳೂರು-ಕಡಂಗ ರಸ್ತೆ ಕಾಮಗಾರಿ ಪ್ರಗತಿ*
- *ನೆಬ್ಬೂರು ಗೌಡ ಸಂಘದಿಂದ ಹುತ್ತರಿ ಊರೋರ್ಮೆ ಸಂತೋಷಕೂಟ*
- *ಎಳ್ಳುಕೊಚ್ಚಿಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ 48ನೇ ದೀಪೋತ್ಸವ*
- *ಐವರು ಭಯೋತ್ಪಾದಕರನ್ನು ಸದೆಬಡಿದ ಸೇನೆ : ಇಬ್ಬರು ಯೋಧರಿಗೆ ಗಾಯ*
- *ಕುಶಾಲನಗರ ರೋಟರಿ ಸಂಸ್ಥೆಯಿಂದ ಗ್ರಂಥಾಲಯಕ್ಕೆ ಪೀಠೋಪಕರಣ ವಿತರಣೆ*
- *ಕೊಡಗಿನಲ್ಲಿ ಫುಟ್ಬಾಲ್ ಬೆಳವಣಿಗೆಗೆ ಕೈ ಜೋಡಿಸಿ : ಪಾಣತ್ತಲೆ ಜಗದೀಶ್ ಮಂದಪ್ಪ ಕರೆ*