ಮಡಿಕೇರಿ ಡಿ.19 NEWS DESK : ಆಯುಷ್ ಇಲಾಖೆಯಿಂದ ಸಾರ್ವಜನಿಕರ ಆರೋಗ್ಯಕ್ಕಾಗಿ “ಪ್ರಕೃತಿ ಪರೀಕ್ಷಾ ಅಭಿಯಾನ”ವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಮನುಷ್ಯನ “ದೇಹದ ಪ್ರಕೃತಿಯನ್ನು ತಿಳಿದು ಅದರ ಅನುಸಾರ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಸಾರ್ವಜನಿಕರು ಕಾಪಾಡಿಕೊಳ್ಳಬಹುದಾಗಿದೆ ಎಂಬ ಆಶಯದೊಂದಿಗೆ ಭಾರತ ಸರ್ಕಾರದ ಆಯುಷ್ ಮಂತ್ರಾಲಯ “ದೇಶ್ ಕೀ ಪ್ರಕೃತಿ ಪರೀಕ್ಷಾ ಅಭಿಯಾನ” ಹಮ್ಮಿಕೊಂಡಿದೆ. ನ.26 ರಿಂದ ಈ ಅಭಿಯಾನ ಪ್ರಾರಂಭವಾಗಿದ್ದು, ಡಿ.26 ರವರೆಗೆ ದೇಶಾದ್ಯಂತ ನಡೆಯಲಿದೆ. ಇದು ವಿಶೇಷ ಮೊಬೈಲ್ ಆ್ಯಪ್ ಆಧಾರಿತ ಕಾರ್ಯಕ್ರಮವಾಗಿದ್ದು, ಈ ಆ್ಯಪ್‍ನ್ನು ಪ್ಲೇ-ಸ್ಟೋರ್ ಮೂಲಕ ಆಂಡ್ರಾಯಿಡ್ ಮೊಬೈಲ್‍ನಲ್ಲಿ ಅಥವಾ ಐ-ಫೋನ್‍ನಲ್ಲಿ ಅಳವಡಿಸಿಕೊಂಡು ಕೆಲವು ಮೂಲ ಪ್ರಶ್ನೆಗಳಿಗೆ ಉತ್ತರಿಸಿದ್ದಲ್ಲಿ ಕಾಲಕಾಲಕ್ಕೆ ನಿಮ್ಮ ಪ್ರಕೃತಿ ಅನುಸಾರವಾಗಿ ಆರೋಗ್ಯಕ್ಕೆ ಪೂರಕವಾದ ಸೂಚನೆ ಮತ್ತು ಸಲಹೆಗಳು ನಿಮ್ಮ ಮೊಬೈಲ್‍ನಲ್ಲಿ ಬರಲಿದೆ. ಈ ಅಭಿಯಾನವನ್ನು ಜಿಲ್ಲಾ ಆಯುಷ್ ಇಲಾಖೆಯು ಕೊಡಗು ಜಿಲ್ಲೆಯಾದ್ಯಂತ ಹಮ್ಮಿಕೊಂಡಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿಯಿಂದ ಸ್ವಯಂ ಪ್ರೇರಿತವಾಗಿ ಹತ್ತಿರದ ಆಯುಷ್ ಚಿಕಿತ್ಸಾಲಯಗಳಿಗೆ ಮತ್ತು ತಾಲೂಕು ಆಯುಷ್ ಆಸ್ಪತ್ರೆಗಳಿಗೆ ಸಂಪರ್ಕಿಸಿದ್ದಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಮೊಬೈಲ್ ಆ್ಯಪ್ ಅಳವಡಿಸಿ (ಡೌನ್‍ಲೋಡ್) ಮಾಡಿಕೊಡುವಲ್ಲಿ ಹಾಗೂ ನಿಮ್ಮ ಪ್ರಕೃತಿ ನಿರ್ಧರಿಸುವಲ್ಲಿ ಸಹಕರಿಸುತ್ತಾರೆ ಎಂದು ಕೊಡಗು ಜಿಲ್ಲಾ ಆಯುಷ್ ಅಧಿಕಾರಿ ಡಾ|| ರೇಣುಕಾದೇವಿ ತಿಳಿಸಿದ್ದಾರೆ. ಎನ್‍ಐಎಂಎ (ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಷಿಯೇಷನ್) ವತಿಯಿಂದ ಎಲ್ಲಾ ಆಯುಷ್ ಖಾಸಗಿ ವೈದ್ಯರು ಕೂಡ ತಮ್ಮ ತಮ್ಮ ಚಿಕಿತ್ಸಾಲಯದಲ್ಲಿ ಈ ಪ್ರಕೃತಿ ಪರೀಕ್ಷಾ ಅಭಿಯಾನಕ್ಕೆ ಚಾಲನೆ ನೀಡಿದ್ದು, ಇಲ್ಲಿಯೂ ಕೂಡ ಈ ವ್ಯವಸ್ಥೆಯ ಸೌಲಭ್ಯ ಲಭ್ಯವಿದು,್ದ ಈ ಸೌಲಭ್ಯವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು ಎಂದು ಎನ್‍ಐಎಂಎ (ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಷಿಯೇಷನ್) ಅಧ್ಯಕ್ಷರಾದ ಡಾ.ರಾಜಾರಾಮ್ ತಿಳಿಸಿದ್ದಾರೆ.