




ಮಡಿಕೇರಿ ಡಿ.20 NEWS DESK : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ಕ್ಷೇತ್ರದ ಜಾತ್ರೋತ್ಸವವು ಡಿ.23 ರಿಂದ ಡಿ.28ರ ವರೆಗೆ ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಶಶಿ ಜನಾರ್ಧನ ಕಟ್ಟೆಮನೆ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಆರು ದಿನಗಳ ಕಾಲ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಜಾತ್ರೋತ್ಸವವು ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಡಿ.23 ರಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮ, 10.30 ಗಂಟೆಗೆ ಹೊರಕಾಣಿಕೆ ಸಮರ್ಪಣೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, 1 ಗಂಟೆಗೆ ಅನ್ನ ಸಂತರ್ಪಣೆಯಾಗಲಿದೆ. ಸಂಜೆ 7.30 ಗಂಟೆಗೆ ಧ್ವಜಾರೋಹಣ ನೆರವೇರಲಿದ್ದು, ರಾತ್ರಿ 8.30 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, 9 ಗಂಟೆಗೆ ಅನ್ನಸಂತರ್ಪಣೆ ನೆರವೇರಲಿದೆ. ಅಂದು ಹೊರೆಕಾಣಿಕೆ ತರುವವರು ಬೆಳಿಗ್ಗೆ 11.30 ಗಂಟೆಯ ಒಳಗೆ ದೇವಾಲಯದ ಉಗ್ರಾಣಕ್ಕೆ ತಲುಪಿಸುವಂತೆ ಕೋರಿದ್ದಾರೆ. ಡಿ.24 ರಂದು ಬೆಳಿಗ್ಗೆ 5.30 ಗಂಟೆಗೆ ನೈರ್ಮಾಲ್ಯ ಬಲಿ, ಮಧ್ಯಾಹ್ನ 12 ಗಂಟೆಗೆ ಧ್ವಜಸ್ತಂಭ ಪೂಜೆ, 12.15 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30 ಗಂಟೆಗೆ ಶ್ರೀಭೂತಬಲಿ (ತೂಚಂಬಲಿ), 7.45 ಗಂಟೆಗೆ ಧ್ವಜಸ್ತಂಭ ಪೂಜೆ, ರಾತ್ರಿ 8 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, 8.30 ಗಂಟೆಗೆ ಅನ್ನಸಂತರ್ಪಣೆ ನೆರವೇರಲಿದೆ. ಡಿ.25 ರಂದು ಬೆಳಿಗ್ಗೆ 5.30 ಗಂಟೆಗೆ ನೈರ್ಮಾಲ್ಯ ಬಲಿ (ಇರುಬೆಳಕು), ಮಧ್ಯಾಹ್ನ 12 ಗಂಟೆಗೆ ಧ್ವಜಸ್ತಂಭ ಪೂಜೆ, 12.15 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, 1 ಗಂಟೆಗೆ ಅನ್ನಸಂತರ್ಪಣೆ ಜರುಗಲಿದೆ. ಸಂಜೆ 6.30 ಗಂಟೆಗೆ ಶ್ರೀಭೂತಬಲಿ (ತೂಚಂಬಲಿ), 7.45 ಗಂಟೆಗೆ ಧ್ವಜಸ್ತಂಭ ಪೂಜೆ, ರಾತ್ರಿ 8 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, 8.30 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಡಿ.26 ರಂದು ಬೆಳಿಗ್ಗೆ 5.30 ಗಂಟೆಗೆ ನೈರ್ಮಾಲ್ಯ ಬಲಿ (ಇರುಬೆಳಕು), 10.30 ಗಂಟೆಗೆ ತುಲಾಭಾರ ಸೇವೆ, ಮಧ್ಯಾಹ್ನ 12 ಗಂಟೆಗೆ ಧ್ವಜಸ್ತಂಭ ಪೂಜೆ, 12.15 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, 1 ಗಂಟೆಗೆ ಅನ್ನದಾನ ನಡೆಯಲಿದೆ. ಸಂಜೆ 5 ಗಂಟೆಗೆ ನೃತ್ಯ ಬಲಿ (ನೆರಪು), 6 ಗಂಟೆಗೆ ವಸಂತಪೂಜೆ, 7.45ಕ್ಕೆ ಧ್ವಜಸ್ತಂಭ ಪೂಜೆ, ರಾತ್ರಿ 8 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, 8.45ಕ್ಕೆ ದೇವರ ಶಯನೋತ್ಸವ, 9 ಗಂಟೆಗೆ ಅನ್ನಸಂತರ್ಪಣೆ ನೆರವೇರಲಿದೆ. ಡಿ.27 ರಂದು ಬೆಳಿಗ್ಗೆ 7.30 ಗಂಟೆಗೆ ಕವಾಟ ಪೂಜೆ, 10.30 ಗಂಟೆಗೆ ತೈಲಾಭ್ಯಂಜನ, ಪಂಚಾಮೃತ ಅಭಿಷೇಕ, ಮಧ್ಯಾಹ್ನ 12 ಗಂಟೆಗೆ ಧ್ವಜಸ್ತಂಭ ಪೂಜೆ, 12.15 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ಗಂಟೆಗೆ ದೇವರ ಜಳಕಕ್ಕೆ ಹೊರಡುವುದು (ನಂದಿಪಾರೆ ಕಾವೇರಿಯಲ್ಲಿ), 6 ಗಂಟೆಗೆ ದೇವಾಲಯದ ಹೊರಾಂಗಣದಲ್ಲಿ ದೇವರ ನೃತ್ಯಬಲಿ, ನಡೆಭಂಡಾರ, 7.30 ಗಂಟೆಗೆ ಧ್ವಜಾವರೋಹಣ, ರಾತ್ರಿ 8.30 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, 9 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಡಿ.28 ರಂದು ಬೆಳಿಗ್ಗೆ 10.30 ಗಂಟೆಗೆ ನವಕ ಕಲಶ ಪೂಜೆ, ಅಭಿಷೇಕ, ಪಂಚಾಮೃತ ಅಭಿಷೇಕ, ಮಧ್ಯಾಹ್ನ 12.15 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಮಂತ್ರಾಕ್ಷತೆ, 1 ಗಂಟೆಗೆ ಅನ್ನಸಂರ್ಪಣೆ ನೆರವೇರಲಿದೆ ಎಂದು ಶಶಿ ಜನಾರ್ಧನ ಮಾಹಿತಿ ನೀಡಿದ್ದಾರೆ. ದೇವಾಲಯದ ಜಾತ್ರೋತ್ಸವದ ಅಂಗವಾಗಿ ಅನ್ನಸಂತರ್ಪಣೆ ಹಾಗೂ ದೇಣಿಗೆ ನೀಡುವವರು ಕಚೇರಿ ಅಥವಾ ಬ್ಯಾಂಕ್ ಖಾತೆ BANK OF MAHARASTRA MURNAD, IFSC – MAHB0001514, AC NO – 60217415107 ಅಥವಾ BANK OF BARODA MARAGODU, IFSC BARBOVJMAGO, AC NO-64150100003076, MICR-571012153 ಪಾವತಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು ಶಶಿ ಜನಾರ್ಧನ 9449402305, ಕಾರ್ಯದರ್ಶಿ ಕಾಶಿ ಕಾರ್ಯಪ್ಪ 9480244642, ಸಹಾ ಕಾರ್ಯದರ್ಶಿ ಪರಿಯಪಮ್ಮನ ಮಹೇಶ್ 9482326566, ಕೋಶಾಧಿಕಾರಿ ಪೂಣಚ್ಚ ತೋರೆರ 9880255064, ಪ್ರಧಾನ ಅರ್ಚಕರು ವಿಘ್ನೇಶ್ ಭಟ್ 9449911225 ಸಂಪರ್ಕಿಸಬಹುದಾಗಿದೆ.