ನಾಪೋಕ್ಲು ಜ.2 NEWS DESK : ಬಲ್ಲಮಾವಟ್ಟಿ ಗ್ರಾಮ ಪಂಚಾಯಿತಿಯ ಪಡಿಯಾಣಿ ಗ್ರಾಮದ ಸ.ಹಿ.ಪ್ರಾ ಶಾಲೆಗೆ ಸ್ಥಳೀಯರಾದ ಕಡವಿಲ್ ಕರೀಂ ಶಾಲೆಗೆ ಯು.ಪಿ.ಎಸ್.ನ್ನು ಕೊಡುಗೆ ನೀಡಿದರು. ಶಾಲೆಯ ಮುಖ್ಯ ಶಿಕ್ಷಕ ಕೆ.ಸಿ. ಧಮೇಂದ್ರ ಹಾಗೂ ಸಹ ಶಿಕ್ಷಕರು ಕೊಡುಗೆಯನ್ನು ಸ್ವೀಕರಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಶಾಲೆಯ ಶಿಕ್ಷಕಿಯರಾದ ಎಂ.ಪಿ.ಭಾರತಿ. ಎಂ.ಎಸ್.ಬೋಜಮ್ಮ, ಕೆ.ಎ.ಹೇಮಮಾಲಿನಿ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.