ಮಡಿಕೇರಿ ಜ.3 NEWS DESK : ಅಪರಿಚಿತ ವಾಹನ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಸುಂಟಿಕೊಪ್ಪ ಸಮೀಪದ ಕೆದಕಲ್ ನಲ್ಲಿ ನಡೆದಿದೆ. ಕೆದಕಲ್ ಗ್ರಾಮದ ತೋಟದಲ್ಲಿ ರೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚೆಟ್ಟಳ್ಳಿ ಅಬ್ಯಾಲ ಗ್ರಾಮದ ನಿವಾಸಿ ಬಲ್ಲಾರಂಡ ಹರೀಶ್ ತಮ್ಮಯ್ಯ (55) ಮೃತ ದುರ್ದೈವಿ. ಕೆದಕಲ್ ನಲ್ಲಿ ಬಸ್ ನಿಂದ ಇಳಿದ ಹರೀಶ್ ತಮ್ಮಯ್ಯ ಅವರು ರಸ್ತೆ ದಾಟುತ್ತಿದ್ದ ಸಂದರ್ಭ ಅತೀ ವೇಗವಾಗಿ ಬಂದ ಅಪರಿಚಿತ ಕಾರು ಡಿಕ್ಕಿಯಾಗಿ ಪರಾರಿಯಾಗಿದೆ ಎಂದು ಹೇಳಲಾಗಿದೆ. ಜ.1 ರಂದು ರಾತ್ರಿ ಘಟನೆ ನಡೆದಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಹರೀಶ್ ತಮ್ಮಯ್ಯ ಅವರನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಜ.2 ರಂದು ರಾತ್ರಿ ನಿಧನರಾದರು.