Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಮಳೆ ಭೀತಿ! ಶ್ರೀಲಂಕಾ ಹವಾಮಾನ ಇಲಾಖೆ ನೀಡಿದ ಆ ಒಂದು ಎಚ್ಚರಿಕೆ ಅಭಿಮಾನಿಗಳಿಗೆ ಬಿಗ್ ಶಾಕ್!*
  • *ವಾಯುಪಡೆ ಸೇರಲು 10th ಪಾಸ್ ಸಾಕು! ತಿಂಗಳಿಗೆ ಭರ್ಜರಿ ಸಂಬಳ; ನಿಮ್ಮ ಜಿಲ್ಲೆಯಲ್ಲೂ ನೇಮಕಾತಿ ಇದೆಯೇ? ಚೆಕ್ ಮಾಡಿ!*
  • *ಬೆಂಗಳೂರು ಐಪಿಎಲ್ ಪಂದ್ಯಗಳಿಗೆ ಷರತ್ತುಬದ್ಧ ಒಪ್ಪಿಗೆ! ಸಂಭ್ರಮಾಚರಣೆ ಮಾಡಿದ್ರೆ ಬೀಳುತ್ತೆ ದಂಡ? ಗೃಹ ಸಚಿವರು ಹೇಳಿದ್ದೇನು?*
  • *ಗಂಡಸರಿಗೂ ಬಸ್ ಪ್ರಯಾಣ ಉಚಿತ! ಮಹಿಳೆಯರಿಗೆ 25,000 ರೂ. ನಗದು; ಕರ್ನಾಟಕದ ಪಕ್ಕದ ರಾಜ್ಯದಲ್ಲಿ ಭರ್ಜರಿ ಗಿಫ್ಟ್ ಘೋಷಣೆ!*
  • *ಫ್ರೀ.. ಫ್ರೀ.. ಫ್ರೀ! ಪಿಯುಸಿ ಪರೀಕ್ಷೆ ಬರೆಯುವವರಿಗೆ ಸಾರಿಗೆ ಇಲಾಖೆಯಿಂದ ಸಿಹಿಸುದ್ದಿ: ಕಂಡಕ್ಟರ್‌ಗೆ ಈ ಒಂದು ಕಾರ್ಡ್ ತೋರಿಸಿದ್ರೆ ಸಾಕು!*
  • *ಮದೆನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ 100 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಎ.ಎಸ್.ಪೊನ್ನಣ್ಣ ಚಾಲನೆ*
  • *ಮಾ.2ರಂದು “ಕುಂಬ್ಯಾರ್ ಕಲಾಡ್ಚ” ವಾರ್ಷಿಕೋತ್ಸವ*
  • *16ನೇ ಅಂತರಾಷ್ಟ್ರೀಯ ಮಟ್ಟದ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿ ಮಕ್ಕಳ ಸಾಧನೆ*
  • *ಫೆ. 15ರಂದು ಚೆಟ್ಟಳ್ಳಿಯಲ್ಲಿ ಮಹಾಶಿವರಾತ್ರಿ ಆಚರಣೆ*
  • *ಲಂಡನ್‌ನಿಂದ ನೇರವಾಗಿ ಜೈಲಿಗೆ? ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ನೀಡಿದ ಅಂತಿಮ ವಾರ್ನಿಂಗ್‌ನ ಸಾರಾಂಶ ಇಲ್ಲಿದೆ!*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಶ್ರೀ ಮಹಾಮೃತ್ಯುಂಜಯ ದೇವಾಲಯವನ್ನು ಸರಕಾರದ ಅಧೀನಕ್ಕೆ ಒಳಪಡಿಸಲಿ*
ಇತ್ತೀಚಿನ ಸುದ್ದಿಗಳು

*ಶ್ರೀ ಮಹಾಮೃತ್ಯುಂಜಯ ದೇವಾಲಯವನ್ನು ಸರಕಾರದ ಅಧೀನಕ್ಕೆ ಒಳಪಡಿಸಲಿ*

January 4, 20251 Min Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link


ಮಡಿಕೇರಿ ಜ.4 NEWS DESK : ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ದೇವಾಲಯದಲ್ಲಿ ಈಗ ಅಸ್ತಿತ್ವದಲ್ಲಿರುವ ಆಡಳಿತ ಮಂಡಳಿಯನ್ನು ಉಚ್ಚಾಟಿಸಿ ಸರಕಾರ ದೇವಾಲಯವನ್ನು ತನ್ನ ಅಧೀನಕ್ಕೆ ಪಡೆಯಬೇಕೆಂದು ಅಖಿಲ ಕೊಡವ ಸಮಾಜ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಅವರು, ಈಗ ಇರುವ ದೇವಾಲಯ ಆಡಳಿತ ಮಂಡಳಿ ಜಾತಿವಾದಿಯಾಗಿದ್ದು, ಸಂಘರ್ಷಕ್ಕೆ ನಾಂದಿ ಹಾಡಿದೆ. ಅತ್ಯಂತ ಪ್ರಾಚೀನವಾದ ಮಾದೇವ ದೇವಸ್ಥಾನದ ಹೆಸರನ್ನು ಬಾಡಗರಕೇರಿ ಮೃತ್ಯುಂಜಯ ದೇವಾಲಯಕ್ಕೆ ಪರ್ಯಾಯವಾಗಿ ಶ್ರೀಮಹಾಮೃತ್ಯುಂಜಯ ದೇವಾಲಯವೆಂದು ಬದಲಾಯಿಸಿ ಆಡಳಿತ ಮಂಡಳಿ ರಚಿಸಲಾಗಿದೆ ಎಂದು ಆರೋಪಿಸಿದರು. ಮಾದೇವ ದೇವರ ಹೆಸರಿನಡಿ ಸ್ಥಳೀಯ ಸಂಪ್ರದಾಯಕ್ಕೆ ಬದ್ಧವಾಗಿ ಆಡಳಿತ ನಡೆಸಲು ಅಖಿಲ ಕೊಡವ ಸಮಾಜ ಸರಕಾರಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದರು. ಕಟ್ಟೆಮಾಡು ಪಾಪಳಕೇರಿ ಮಾದೇವ ದೇವರ ಸ್ಥಾನಕ್ಕೆ ಸುಮಾರು ಸಾವಿರ ವರ್ಷಗಳ ಇತಿಹಾಸವಿದೆ. ಕೊಡಗಿನಲ್ಲಿ ಪಾಲೇರಿ ರಾಜವಂಶ ಸ್ಥಾಪನೆಯಾಗುವ ಮೊದಲೇ ಈ ದೇವಾಲಯವಿದ್ದು, ಕೆಲವು ಕೊಡವ ಭಾಷಿಕ ಕುಟುಂಬಗಳು ವರ್ಷಾವಧಿ ಪೂಜೆ ನಡೆಸುತ್ತಾ ಬಂದಿರುವುದು ವಾಸ್ತವಾಂಶವಾಗಿದೆ. ಆದರೆ ಕೆಲವು ಪ್ರಭಾವಿ ಜಾತಿವಾದಿಗಳು ಜನರ ದಿಕ್ಕು ತಪ್ಪಿಸಿ ಮಾದೇವ ದೇವರ ಸ್ಥಾನದ ಹೆಸರನ್ನು ಮೃತ್ಯುಂಜಯವೆಂದು ಮರುನಾಮಕರಣ ಮಾಡಿ ಹೊರನಾಡಿನ ಸಂಪ್ರದಾಯವನ್ನು ಮೂಲನಿವಾಸಿಗಳ ಮೇಲೆ ಹೇರುವ ಪ್ರಯತ್ನಗಳು ನಡೆದಿದೆ ಎಂದು ಪರದಂಡ ಸುಬ್ರಮಣಿ ಆರೋಪಿಸಿದರು. ಜಂಟಿ ಕಾರ್ಯದರ್ಶಿ ನಂದೇಟಿರ ರಾಜಾ ಮಾದಪ್ಪ ಮಾತನಾಡಿ ದೇವಾಲಯದಲ್ಲಿ ಸಂಘರ್ಷ ನಡೆದಿದ್ದು, ಹಲ್ಲೆ ಕೂಡ ಆಗಿದೆ. ದೇವಾಲಯಗಳ ಉತ್ಸವದ ಸಂದರ್ಭ ಕೊಡವ ಸಾಂಪ್ರದಾಯಿಕ ಉಡುಪು ತೊಡಲು ಅವಕಾಶವಿದೆ, ಕೇರಳದ ದೇವಾಲಯಗಳಿಗೂ ಕೊಡವ ಉಡುಪು ತೊಡುತ್ತೇವೆ. ಎಲ್ಲೂ ಇಲ್ಲದ ಅಡ್ಡಿ ಇಲ್ಲಿ ಯಾಕೆ ಎಂದು ಪ್ರಶ್ನಿಸಿದರು. ಕೊಡವ ಉಡುಪು ತೊಟ್ಟರೆ ಯಾವುದೇ ಭಕ್ತರಿಗೆ ತೊಂದರೆಯಾಗುವುದಿಲ್ಲ, ನಮ್ಮ ಸಂಪ್ರದಾಯವನ್ನು ಪಾಲಿಸುತ್ತಿದ್ದೇವೆ ಅಷ್ಟೆ. ದೇವಾಲಯದ ಕಾರ್ಯಗಳು ಸುಸೂತ್ರವಾಗಿ ಒಗ್ಗಟ್ಟನಿಂದ ನಡೆಯಬೇಕೆನ್ನುವುದು ನಮ್ಮೆಲ್ಲರ ಅಪೇಕ್ಷೆಯಾಗಿದೆ. ಆದರೆ ಕೊಡವ ಸಾಂಪ್ರದಾಯಿಕ ಉಡುಪಿಗೆ ಅಡ್ಡಿಯಾಗಬಾರದು ಎಂದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ, ಕಾರ್ಯದರ್ಶಿ ಕೀತಿಯಂಡ ವಿಜಯ ಕುಮಾರ್ ಹಾಗೂ ಜಂಟಿ ಕಾರ್ಯದರ್ಶಿ ಮೂವೇರ ರೇಖಾ ಪ್ರಕಾಶ್ ಉಪಸ್ಥಿತರಿದ್ದರು.

Share. Facebook Twitter Pinterest LinkedIn Tumblr Email WhatsApp
Previous Article*ಐಗೂರು ಸರಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿಗೆ ಮನವಿ*
Next Article *ದೇವಾಲಯ ಸಮಿತಿಯ ಕಟ್ಟುಪಾಡುಗಳಿಗೆ ನಾವು ಬದ್ಧ : ಕಟ್ಟೆಮಾಡು ಗೌಡ ಸಮುದಾಯ ಸ್ಪಷ್ಟನೆ*

Website design development company services in Mangalore

Forex Trading Teacher in India

Related Posts

*ವಾಯುಪಡೆ ಸೇರಲು 10th ಪಾಸ್ ಸಾಕು! ತಿಂಗಳಿಗೆ ಭರ್ಜರಿ ಸಂಬಳ; ನಿಮ್ಮ ಜಿಲ್ಲೆಯಲ್ಲೂ ನೇಮಕಾತಿ ಇದೆಯೇ? ಚೆಕ್ ಮಾಡಿ!*

February 14, 2026

*ಬೆಂಗಳೂರು ಐಪಿಎಲ್ ಪಂದ್ಯಗಳಿಗೆ ಷರತ್ತುಬದ್ಧ ಒಪ್ಪಿಗೆ! ಸಂಭ್ರಮಾಚರಣೆ ಮಾಡಿದ್ರೆ ಬೀಳುತ್ತೆ ದಂಡ? ಗೃಹ ಸಚಿವರು ಹೇಳಿದ್ದೇನು?*

February 14, 2026

*ಗಂಡಸರಿಗೂ ಬಸ್ ಪ್ರಯಾಣ ಉಚಿತ! ಮಹಿಳೆಯರಿಗೆ 25,000 ರೂ. ನಗದು; ಕರ್ನಾಟಕದ ಪಕ್ಕದ ರಾಜ್ಯದಲ್ಲಿ ಭರ್ಜರಿ ಗಿಫ್ಟ್ ಘೋಷಣೆ!*

February 13, 2026

*ಬೆಂಗಳೂರು ಐಪಿಎಲ್ ಪಂದ್ಯಗಳಿಗೆ ಷರತ್ತುಬದ್ಧ ಒಪ್ಪಿಗೆ! ಸಂಭ್ರಮಾಚರಣೆ ಮಾಡಿದ್ರೆ ಬೀಳುತ್ತೆ ದಂಡ? ಗೃಹ ಸಚಿವರು ಹೇಳಿದ್ದೇನು?*

February 14, 2026

ಬೆಂಗಳೂರು: ಸಿಲಿಕಾನ್ ಸಿಟಿಯ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026ರ ಐಪಿಎಲ್ (IPL) ಪಂದ್ಯಗಳನ್ನು…

*ಗಂಡಸರಿಗೂ ಬಸ್ ಪ್ರಯಾಣ ಉಚಿತ! ಮಹಿಳೆಯರಿಗೆ 25,000 ರೂ. ನಗದು; ಕರ್ನಾಟಕದ ಪಕ್ಕದ ರಾಜ್ಯದಲ್ಲಿ ಭರ್ಜರಿ ಗಿಫ್ಟ್ ಘೋಷಣೆ!*

February 13, 2026

*ಫ್ರೀ.. ಫ್ರೀ.. ಫ್ರೀ! ಪಿಯುಸಿ ಪರೀಕ್ಷೆ ಬರೆಯುವವರಿಗೆ ಸಾರಿಗೆ ಇಲಾಖೆಯಿಂದ ಸಿಹಿಸುದ್ದಿ: ಕಂಡಕ್ಟರ್‌ಗೆ ಈ ಒಂದು ಕಾರ್ಡ್ ತೋರಿಸಿದ್ರೆ ಸಾಕು!*

February 13, 2026

*ಮದೆನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ 100 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಎ.ಎಸ್.ಪೊನ್ನಣ್ಣ ಚಾಲನೆ*

February 13, 2026

*ಮಾ.2ರಂದು “ಕುಂಬ್ಯಾರ್ ಕಲಾಡ್ಚ” ವಾರ್ಷಿಕೋತ್ಸವ*

February 13, 2026

*16ನೇ ಅಂತರಾಷ್ಟ್ರೀಯ ಮಟ್ಟದ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿ ಮಕ್ಕಳ ಸಾಧನೆ*

February 13, 2026

*ಫೆ. 15ರಂದು ಚೆಟ್ಟಳ್ಳಿಯಲ್ಲಿ ಮಹಾಶಿವರಾತ್ರಿ ಆಚರಣೆ*

February 13, 2026

*ಲಂಡನ್‌ನಿಂದ ನೇರವಾಗಿ ಜೈಲಿಗೆ? ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ನೀಡಿದ ಅಂತಿಮ ವಾರ್ನಿಂಗ್‌ನ ಸಾರಾಂಶ ಇಲ್ಲಿದೆ!*

February 13, 2026

*ಸಂಭ್ರಮದಿಂದ ಜರುಗಿದ ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ನ ವಾರ್ಷಿಕ ಮಹೋತ್ಸವ. ಮೈಸೂರು ಧರ್ಮಾಧ್ಯಕ್ಷರಾದ ಬಿಷಪ್ ಫ್ರಾನ್ಸಿಸ್ ಸೆರಾವೋ ರವರ ನೇತೃತ್ವದಲ್ಲಿ ಜರುಗಿದ ದಿವ್ಯ ಬಲಿಪೂಜೆ*

February 13, 2026

*ಫೆ.15 ರಂದು ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ*

February 13, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.