ಹೆಬ್ಬಾಲೆ ಜ.6 NEWS DESK : ಹೆಬ್ಬಾಲೆ ಗ್ರಾ.ಪಂ ವ್ಯಾಪ್ತಿಯ ಹುಲುಸೆ ಫ್ರೆಂಡ್ಸ್ ವತಿಯಿಂದ ಹೆಚ್.ವಿ.ಎಲ್ 2024-25ನೇ ಸಾಲಿನ ಲೀಗ್ ಮಾದರಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ನಡೆಯಿತು. ಹುಲುಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಪಂದ್ಯಾವಳಿಯನ್ನು ಹೆಬ್ಬಾಲೆ ಗ್ರಾ.ಪಂ ಮಾಜಿ ಸದಸ್ಯ, ಗುತ್ತಿಗೆದಾರ ವೆಂಕಟೇಶ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಕ್ರೀಡಾಕೂಟಗಳು ನಡೆಯುವುದರಿಂದಾಗಿ ಯುವಕರು ಒಂದೆಡೆ ಸೇರುವ ಮೂಲಕ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಅಂಶಗಳ ಬಗ್ಗೆ ಚರ್ಚಿಸಲು ಹಾಗೂ ಯುವಕರಿಗೆ ಕ್ರೀಡೆಯ ಬಗ್ಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಸಹಕಾರಿಯಾಗುತ್ತದೆ. ಇದರ ಮುಖೇನ ಯುವಕರು ಸಂಘಟನೆಯ ಮನೋಭಾವದಿಂದ ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆಯ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಹಕಾರವಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ಕೂಡಿಗೆ ಕ್ರೀಡಾಪಟು ಚಂದ್ರಶೇಖರ್, ಹರೀಶ್,ಹುಲುಸೆ ಫ್ರೆಂಡ್ಸ್ ನ ಪದಾಧಿಕಾರಿಗಳಾದ ದಿಲೀಪ್, ದರ್ಶನ್, ಗೌತಮ್, ಚಂದ್ರು,ಶಂಕರ್, ಅಭಿ ಸೇರಿದಂತೆ ಸಮಿತಿಯ ಸದಸ್ಯರು ಲೀಗ್ ನ ಎಲ್ಲಾ ಕೀಡಾಪಟುಗಳು ಭಾಗವಹಿಸಿದರು. ವಾಲಿಬಾಲ್ ಪಂದ್ಯಾವಳಿಯಲ್ಲಿ ಕುಶಾಲನಗರ, ಸೋಮವಾರಪೇಟೆ ಸೇರಿದಂತೆ ರಾಜ್ಯ ಮಟ್ಟದ ಕ್ರೀಡಾ ಪಟುಗಳು ಭಾಗವಹಿಸದ್ದರು.