ವಿರಾಜಪೇಟೆ ಜ.9 NEWS DESK : ಸಿದ್ದಾಪುರದ ಶ್ರೀ ದುರ್ಗಾ ಭಗವತಿ ದೇವಾಲಯದಲ್ಲಿ ತಿರು ಮಹೋತ್ಸವ ಪೂಜಾ ಕಾರ್ಯಕ್ರಮದ ಅಂಗವಾಗಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ವಿರಾಜಪೇಟೆಯ ನಾಟ್ಯಾಂಜಲಿ ನೃತ್ಯ ಶಾಲೆಯ ವಿದ್ಯಾರ್ಥಿಗಳು ಭಜನೆ ನೃತ್ಯ ಪ್ರದರ್ಶನ ನೀಡಿದರು. ನಂತರ ದೇವರ ಉತ್ಸವ ಮೂರ್ತಿಯ ಮೆರವಣಿಗೆಯಲ್ಲಿ ಭಜನೆ ನೃತ್ಯ ಪ್ರದರ್ಶನ ನೀಡಿ ಜನಮನ್ನಣೆ ಗಳಿಸಿ ಪ್ರಶಂಸೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ನೃತ್ಯ ಶಾಲೆಯ ಸಂಸ್ಥಾಪಕರಾದ ಹೇಮಾವತಿ ಕಾಂತರಾಜ್, ನೃತ್ಯ ಗುರುಗಳಾದ ಕಾವ್ಯಶ್ರೀ ಪಾಲ್ಗೊಂಡಿದ್ದರು.