ಮಡಿಕೇರಿ ಜ.22 NEWS DESK : ದಕ್ಷಿಣ ಕನ್ನಡ ಮತ್ತು ಕೊಡಗು ಗೌಡ ಜನಾಂಗದ ಏಳಿಗೆಗಾಗಿ ಶ್ರಮಿಸುತ್ತಿರುವ ದಕ್ಷಿಣ ಕನ್ನಡ ಮತ್ತು ಕೊಡಗು ಗೌಡ ಸಮಾಜ ಅಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಕೊಡಗು ಜಿಲ್ಲೆಯ ಪೈಕೇರ ಮನೋಹರ್ ಮಾದಪ್ಪ, ಉಪಾಧ್ಯಕ್ಷರಾಗಿ ರಾಧಾಕೃಷ್ಣ ನಂದಿಲ ಹಾಗೂ ಕಾರ್ಯದರ್ಶಿಯಾಗಿ ದುಗ್ಗಳ ಕಪಿಲ್ ಆಯ್ಕೆಯಾಗಿದ್ದಾರೆ. ಸುಳ್ಯ ಗೌಡ ಸಮಾಜದಲ್ಲಿ ನಿರ್ಗಮಿತ ಅಧ್ಯಕ್ಷ ಮುಂಡೋಡಿ ನಿತ್ಯಾನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಕೋಶಾಧಿಕಾರಿಯಾಗಿ ಪುರುಷೋತ್ತಮ ಮುಂಗಲಿ ಮನೆ, ನಿರ್ದೇಶಕರುಗಳಾಗಿ ಅಂಬೆಕಲ್ ನವೀನ್ ಕುಶಾಲಪ್ಪ, ಎಂ.ಪಿ.ಉಮೇಶ್, ಪುದಿಯನೆರವನ ರಿಷಿತ್ ಮಾದಯ್ಯ, ಅಶೋಕ್ ಶೇಡಿ, ಕೆ.ವಿಜಯ ಗೌಡ ವೇಣೂರು, ಕಿಶೋರ್ ವಲಂಬುರ, ಯಾಲದಾಳು ಸೋಮಯ್ಯ, ಕೊಂಬಾರನ ರೋಶನ್, ಜ್ಞಾನೇಶ್ ಸುಳ್ಯ, ಬಾಲಾಡಿ ಮನೋಜ್, ಪ್ರವೀಣ್ ಕುಂಟ್ಯಾನ, ಪೊನ್ನಚ್ಚನ ಮೋಹನ್, ಧನಂಜಯ್ ಅಡ್ಪಂಗಾಯ ಸೇರಿದಂತೆ ಕೊಡಗಿನಿಂದ 8 ಮತ್ತು ದಕ್ಷಿಣ ಕನ್ನಡದಿಂದ 9 ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.
ಸಲಹಾ ಸಮಿತಿಯ ಸದಸ್ಯರಾಗಿ ಗಂಗಾಧರ, ಡಿ.ಬಿ.ಬಾಲಕೃಷ್ಣ, ಎಸ್.ಆರ್.ಸೂರಯ್ಯ, ಪೇರಿಯಾನ ಜಯಾನಂದ, ತೋಟಂಬೈಲು ಮನೋಹರ್, ಪಾಣತ್ತಲೆ ಪಳಂಗಪ್ಪ, ನಾಗೇಶ್ ಕೆಡೆಂಜಿ, ದಯಾನಂದ ಅಲಡ್ಕ, ರಾಜೇಶ್ ಬೆಳ್ತಂಗಡಿ, ಅನಂತ ಕುಮಾರ್ ಕೋಳಿ ಮುಡಿಯಾನ, ಕೇಶವಾನಂದ ಯಾಲದಾಳು, ತುಂತಜೆ ಗಣೇಶ್, ನಿತ್ಯಾನಂದ ಮುಂಡೋಡಿ, ಕೆ.ಮಾಧವ ಗೌಡ ಪೆರಿಯೋತ್ತಡಿ, ಸೂರಜ್ ವಲಂಬುರ್, ವಸಂತ ವೀರಮಂಗಲ, ಸದಾನಂದ ಮಾವೋಜಿ (ಅರೆಭಾಷೆ ಅಕಾಡೆಮಿ ಅಧ್ಯಕ್ಷರು), ಪಂಜಿಪಳ್ಳ ವೆಂಕಪ್ಪಗೌಡ, ಯಂ.ಬೋಜಪ್ಪ ಗೌಡ, ಯಾಲದಾಳು ಕೇಶವಾನಂದ, ಕುಂಟಿಕಾನ ಲಕ್ಷ್ಮಣ ಗೌಡ ನೇಮಕಗೊಂಡರು.
Breaking News
- *ದಕ್ಷಿಣ ಕೊಡಗಿನಲ್ಲಿ ಸಣ್ಣ ಕೈಗಾರಿಕಾ ಪ್ರದೇಶಾಭಿವೃದ್ಧಿ : 50 ಏಕರೆ ಭೂಮಿ ಮಂಜೂರಾತಿಗೆ ಆಪ್ ಮನವಿ*
- *ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು : 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ಕೊಡಗಿನ ವಿಶ್ವಜಿತ್ ಹಾಗೂ ಪೂಜಿತ್ ಆಯ್ಕೆ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ದೃಶ್ಯ ಅಚ್ಚಪ್ಪ ಆಯ್ಕೆ*
- *ಹೆಬ್ಬಾಲೆ : ಜ.23 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ಮಡಿಕೇರಿಯಲ್ಲಿ ಅನ್ನದಾನ*
- *ಜ.26 ರಂದು ಲೋಕಾಪ೯ಣೆಯಾಗಲಿದೆ ಮತ್ತೆ ವಸಂತ*
- *ಹೆಗ್ಗಳ ಗ್ರಾಮದ ಸರ್ಕಾರಿ ಶಾಲೆಗೆ ಕಂಪ್ಯೂಟರ್ ಕೊಡುಗೆ*
- *ಎನ್.ಯು.ನಾಚಪ್ಪ ವಿರುದ್ಧ ಪ್ರಕರಣ : ಮಡಿಕೇರಿ ಕೊಡವ ಸಮಾಜ ಖಂಡನೆ*
- *ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿಗೆ ಪಿ.ಹೆಚ್.ಡಿ ಪದವಿ*