ಕುಶಾಲನಗರ ಜ.22 NEWS DESK : ಕುಶಾಲನಗರ ತಾಲ್ಲೂಕು ಸೌಂದರ್ಯ ವರ್ಧಕ ಸಂಘದ ಆಶ್ರಯದಲ್ಲಿ ಜಿಲ್ಲೆಯ ಸೌಂದರ್ಯ ತಜ್ಞರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು. ಕುಶಾಲನಗರ ಸಮೀಪದ ಅತಿಥಿ ಕಂಫರ್ಟ್ಸ್ ಸಭಾಂಗಣದಲ್ಲಿ ಬೆಂಗಳೂರು ಬ್ಯೂಟಿ ಗ್ಯಾಂಗ್ ಸಂಸ್ಥೆಯ ತಜ್ಞರಿಂದ ಸಂಘದ ಸದಸ್ಯರಿಗೆ ಆಧುನಿಕ ಕೇಶ ವಿನ್ಯಾಸದ ಬಗ್ಗೆ ತರಬೇತಿ ಮತ್ತು ಕಾರ್ಯಾಗಾರ ನಡೆಯಿತು. ತಾಲ್ಲೂಕು ಸಂಘದ ಅಧ್ಯಕ್ಷೆ ನಾಗಮಣಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಗಾರವನ್ನು ಕೊಡಗು ಜಿಲ್ಲಾ ಬ್ಯುಟಿಷಿಯನ್ ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷ ವನಿತಾ ಚಂದ್ರಮೋಹನ್ ಉದ್ಘಾಟಿಸಿದರು. ಜಿಲ್ಲಾ ಬ್ಯೂಟಿಷಿಯನ್ ಅಸೋಸಿಯೇಷನ್ ಅಧ್ಯಕ್ಷೆ ರತ್ನ ಯತೀಶ್ ಪಾಲ್ಗೊಂಡು ಕಾರ್ಯಾಗಾರಕ್ಕೆ ಶುಭ ಕೋರಿದರು. ಕಾರ್ಯಾಗಾರದಲ್ಲಿ ಜಿಲ್ಲೆಯ 70ಕ್ಕೂ ಅಧಿಕ ಸೌಂದರ್ಯವರ್ಧಕ ತಜ್ಞರು ಪಾಲ್ಗೊಂಡಿದ್ದರು. ಕುಶಾಲನಗರ ತಾಲ್ಲೂಕು ಸಂಘದ ಕಾರ್ಯದರ್ಶಿ ಮಧು ಲೋಕೇಶ್ , ಉಪಾಧ್ಯಕ್ಷೆ ಡೆಸಿಲ್ಲ, ಪ್ರಧಾನ ಕಾರ್ಯದರ್ಶಿ ನವ್ಯ, ಸಂಘಟನಾ ಕಾರ್ಯದರ್ಶಿ ತಾಜ್, ಖಜಾಂಚಿ ಲತಾ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಪವಿತ್ರ ರಾಜೇಶ್, ಕಾರ್ಯದರ್ಶಿ ಚೇತನ, ಮಡಿಕೇರಿ ತಾಲ್ಲೂಕು ಉಪಾಧ್ಯಕ್ಷೆ ಸರಿತಾ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷೆ ದೇವಕಿ, ಕುಶಾಲನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ಸಂಘದ ಪದಾಧಿಕಾರಿಗಳು ಸದಸ್ಯರು ಇದ್ದರು.