ಮಡಿಕೇರಿ ಜ.10 NEWS DESK : ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಮುಂಭಾಗದಲ್ಲಿ ನೂತನವಾಗಿ ಒಳಚರಂಡಿ ವ್ಯವಸ್ಥೆಯ ಕಾಮಗಾರಿಯನ್ನು ಕೈಗೊಳ್ಳುವಂತೆ ಸಹಕಾರ ಸಂಘ ಮನವಿ ಮಾಡಿದೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರಿಗೆ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಮತ್ತು ಸಂಘದ ಸದಸ್ಯರು ಮನವಿಯನ್ನು ಸಲ್ಲಿಸಿದರು. ಮನವಿಯನ್ನು ಸ್ವೀಕರಿಸಿ ಮಾತನಾಡಿದ ಶಾಸಕರು ಸ್ಧಳ ವೀಕ್ಷಣೆ ಮಾಡಿ ವಾಹನಗಳ ದಟ್ಟಣೆ ಇರುವ ಸ್ಧಳವಾಗಿರುವ ಕೂಡಿಗೆ ಸಮೀಪದ ಹಾರಂಗಿ ನದಿ ಸೇತುವೆಯ ಸಮೀಪದಿಂದ ಡೈರಿ ಸರ್ಕಲ್ ನವರೆಗೆ ವಾಹನಗಳ ನಿಲುಗಡೆಗೆ ಸುಸಜ್ಜಿತವಾದ ವ್ಯವಸ್ಥೆ ಯನ್ನು ಕಲ್ಪಿಸುವ ಭರವಸೆ ಜೊತೆಯಲ್ಲಿ ಅದಕ್ಕೆ ಸಂಬಂಧಿಸಿದ ಇಲಾಖೆಯ ಮೂಲಕ ಕ್ರಿಯಾ ಯೋಜನೆ ತಯಾರಿಸಿ ಕಾಮಗಾರಿಯನ್ನು ಕೈಗೊಳ್ಳುವ ಭರವಸೆಯನ್ನು ನೀಡಿದರು. ಈ ಸಂದರ್ಭ ರಾಜ್ಯ ಕಾಂಗ್ರೆಸ್ ಸಮಿತಿ ಸದಸ್ಯ ಮಂಜುನಾಥ ಗುಂಡೂರಾವ್, ಕುಶಾಲನಗರ ಕುಡ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್, ಸಹಕಾರ ಸಂಘದ ಮಾಜಿ ನಿರ್ದೇಶಕ ಕೆ .ಕೆ. ನಾಗರಾಜಶೆಟ್ಟ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಪಿ. ಮೀನಾ, ಸಂಘದ ಸದಸ್ಯರಾದ ಮಧುಕುಮಾರ್, ಕೂಡುಮಂಗಳೂರು ರಾಜು, ರಘು, ನೀರು ಬಳಕೆದಾರ ಮಹಾ ಮಂಡಲದ ನಿರ್ದೇಶಕಿ ಉಮಾ ಪ್ರಭಾಕರ್ ಸೇರಿದಂತೆ ಹಲವಾರು ರೈತರು ಹಾಜರಿದ್ದರು.