ಮಡಿಕೇರಿ ಜ.11 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಂಸ್ಕೃತ ಸಿರಿಬಳಗ ಟ್ರಸ್ಟ್ ಹಾಗೂ ಬೆಟ್ಟದಳ್ಳಿ ಯಶೋದೆ ರಂಗ ಟ್ರಸ್ಟ್, ಸಂಯುಕ್ತ ಆಶ್ರಯದಲ್ಲಿ ಜ.13 ರಂದು ನಿರ್ದಿಗಂತ ಪ್ರಸ್ತುತಪಡಿಸುವ “ತಿಂಡಿಗೆ ಬಂದ ತುಂಡೇರಾಯ” ಉಚಿತ ನಾಟಕ ಪ್ರದರ್ಶನ ನಡೆಯಲಿದೆ.ಮಡಿಕೇರಿಯ ಪೊಲೀಸ್ ಮೈತ್ರಿ ಭವನದಲ್ಲಿ ಸಂಜೆ 6.30ಕ್ಕೆ ನಡೆಯಲಿದ್ದು, ಕೊಡಗು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಜರಾಮನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ವಹಿಸಲಿದ್ದಾರೆ. ನಾಟಕಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ದೊರೆಯಲಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಎಸ್.ಐ ಮುನಿರ್ ಅಹಮದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೂಲ ಬರ್ಟೋಲ್ಟ್ ಬ್ರೆಕ್ಟ್ ಅವರ ಆಂಗ್ಲ ನಾಟಕ “The Resistable Rise of Arture Ui”ನ ಅನುವಾದಿತ ನಾಟಕ ಇದಾಗಿದ್ದು, ದೇಶ ಕಂಡ ಅತ್ಯುತ್ತಮ ನಟ ಪ್ರಕಾಶ್ ರಾಜ್ ರೈ ಅವರ ನಿರ್ದಿಗಂತ ತಂಡದಿಂದ ನಾಟಕ ನಡೆಯಲಿದೆ. ನಾಟಕದ ನಿರ್ದೇಶನ ಪರಿಕಲ್ಪನೆ ಮತ್ತು ವಿನ್ಯಾಸವನ್ನು ನಿರ್ದಿಗಂತ ತಂಡದ ಶಕೀಲ್ ಅಹಮದ್ ರಚಿಸಿರುತ್ತಾರೆ.