ಮಡಿಕೇರಿ ಜ.11 NEWS DESK : ಕೆದಮುಳ್ಳೂರು ವಿವಿಧೋದ್ದೇಶ ಸಹಕಾರ ದವಸ ಭಂಡಾರದ ನೂತನ ಅಧ್ಯಕ್ಷರಾಗಿ ಮಾಳೇಟಿರ ಪ್ರಶಾಂತ್ ಉತ್ತಪ್ಪ ಹಾಗೂ ಉಪಾಧ್ಯಕ್ಷರಾಗಿ ಮಾಳೇಟಿರ ಜೀವನ್ ಮುದ್ದಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಮಾಳೇಟಿರ ಪ್ರಶಾಂತ್ ಉತ್ತಪ್ಪ, ಮಾಳೇಟಿರ ಜೀವನ್ ಮುದ್ದಯ್ಯ, ಮಾಳೇಟಿರ ಬೃಂದ ತಿಮ್ಮಯ್ಯ, ಪುದಿಯನೆರವನ ಡಾಲು ಪೂಣಚ್ಚ, ಬಿ.ಕೆ.ಸಹದೇವ, ತಂಬಂಡ ಇಮ್ಮಿ ಪೊನ್ನಪ್ಪ, ಪ್ರವೀಣ್ ಕ್ರಾಸ್ತ, ಮಾಳೇಟಿರ ಡಾಟಿ ಗಣಪತಿ, ತುಳಸಿ ಹಾಗೂ ಬಿ.ಜೆ.ಅನಿತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಣಿ ಕಾರ್ಯನಿರ್ವಹಿಸಿದರು.