
ನಾಪೋಕ್ಲು ಜ.14 NEWS DESK : ಆಕಸ್ಮಿಕವಾಗಿ ಬೆಂಕಿ ತಗುಲಿ ಭತ್ತ ಹಾಗೂ ಹುಲ್ಲು ಉರಿದು ಅಪಾರ ಪ್ರಮಾಣದ ನಷ್ಟ ಸಂಭವಿಸಿದ ಘಟನೆ ನಾಪೋಕ್ಲು ಸಮೀಪದ ಕೈಕಾಡು ಗ್ರಾಮದಲ್ಲಿ ನಡೆದಿದೆ. ಯಂತ್ರದ ಸಹಾಯದಿಂದ ಗ್ರಾಮದ ಮಾಜಿ ಸೈನಿಕ ಕುಲ್ಲಚೆಟ್ಟಿ ನಾಣಯ್ಯ (ತಮ್ಮಣಿ) ಎಂಬವರ ಮನೆಯಂಗಳದಲ್ಲಿ ಕಾರ್ಮಿಕರು ಭತ್ತ ಒಕ್ಕಲು ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಬೆಂಕಿ ತಗಲಿದ್ದು ಅಪಾರ ಪ್ರಮಾಣದ ಭತ್ತ ಮತ್ತು ಹುಲ್ಲು ನಷ್ಟ ಸಂಭವಿಸಿದೆ. ಜೊತೆಗೆ ಶೆಡ್‍ನಲ್ಲಿದ್ದ ಕಾರು ಸಹ ಬೆಂಕಿಯಿಂದ ಹಾನಿಗೊಳಗಾಗಿದೆ. ತಕ್ಷಣ ಮಾಹಿತಿ ತಿಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಿ ಇನ್ನೂ ಹೆಚ್ಚಿನ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಿದರು.
ವರದಿ : ದುಗ್ಗಳ ಸದಾನಂದ.









