ಕುಶಾಲನಗರ NEWS DESK ಜ.20 : ಕುಶಾಲನಗರ ಡ್ರೀಮ್ಸ್ ಡೇ ಕೇರ್ ಪ್ಲೇ ಹೋಂ ಶಾಲೆಯಲ್ಲಿ ಪುಟಾಣಿಗಳಿಗೆ ಛದ್ಮವೇಷ ಕಾರ್ಯಕ್ರಮ ನಡೆಯಿತು. ಕುಶಾಲನಗರ ಕೊಡವ ಸಮಾಜ ಆವರಣದ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು ಅವರು ಪಾಲ್ಗೊಂಡು ಮಕ್ಕಳಿಗೆ ಹಿತವಚನ ನುಡಿದರು. ಪುಟಾಣಿ ಮಕ್ಕಳು ವಿವಿಧ ವೇಷಗಳನ್ನು ಧರಿಸಿ ಛದ್ಮವೇಷ ಸ್ಪರ್ಧೆಯಲ್ಲಿ ಪಾಲ್ಗೊಂಡರು. ನಂತರ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪತ್ರಕರ್ತ ಎಂ.ಎನ್.ಚಂದ್ರಮೋಹನ್ ಉಪಸ್ಥಿತರಿದ್ದರು. ಇದೆ ಸಂದರ್ಭ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆ ಪ್ರಮುಖರಾದ ಚೈತನ್ಯ ಸಿ ಮೋಹನ್, ವಿನುತಾ ಇದ್ದರು.