
ಮಡಿಕೇರಿ ಜ.21 NEWS DESK : ಜಾರ್ಕಂಡ್ ನಲ್ಲಿ ಜ.29 ರಿಂದ ಫೆ.2ರವರೆಗೆ ನಡೆಯಲಿರುವ 19 ವರ್ಷದೊಳಗಿನ ರಾಷ್ಟ್ರೀಯ ಬಾಲಕರ ಹಾಕಿ ತಂಡಕ್ಕೆ ಕೊಡಗಿನ ಚೋಯಮಂದಡ ಲಿಂಪಿತ್ ಪೊನ್ನಪ್ಪ ಮತ್ತು ಚೆಕ್ಕೇರ ಸಿದ್ದಾಂತ್ ಉತ್ತಪ್ಪ ಆಯ್ಕೆಯಾಗಿದ್ದಾರೆ. ಲಿಂಪಿತ್ ಮರ್ಡೋಡ ಗ್ರಾಮದ ನಾಣಯ್ಯ ಮತ್ತು ವನಜಾಕ್ಷಿ ದಂಪತಿಯ ಪುತ್ರ.ಸಿದ್ದಾಂತ್ ಚೆಕ್ಕೇರ ಸುಮನ್ ಎನ್. ಕಿರಣ್ ಅವರ ಪುತ್ರ.









