ಮಡಿಕೇರಿ ಜ.22 NEWS DESK : ಉಪನ್ಯಾಸಕಿ ಮತ್ತು ಲೇಖಕಿ ಕೆ.ಜಯಲಕ್ಷ್ಮಿ ಅವರು ಬರೆದಿರುವ ಮತ್ತೆ ವಸಂತ ಹೆಸರಿನ ಕಥಾ ಸಂಕಲನ ಇದೇ ಜ.26 ರಂದು ಲೋಕಾರ್ಪಣೆಯಾಗಲಿದೆ. ನಗರದ ರೆಡ್ ಬ್ರಿಕ್ಸ್ ಇನ್ ಸಭಾಂಗಣದಲ್ಲಿ ಜ.26 ರಂದು ಬೆಳಗ್ಗೆ 10 ಗಂಟೆಗೆ ಮತ್ತೆ ವಸಂತ ಕಥಾ ಸಂಕಲನವನ್ನು ಆಕಾಶವಾಣಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಲೋಕಾರ್ಪಣೆ ಮಾಡಲಿದ್ದಾರೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಟಿ. ಪಿ ರಮೇಶ್ ಅಧ್ಯಕ್ಷತೆಯ ಕಾರ್ಯಕ್ರಮದಲ್ಲಿ ಶಕ್ತಿ ಪತ್ರಿಕೆಯ ಸಂಪಾದಕ ಜಿ .ಚಿದ್ವಿಲಾಸ್, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್ ಟಿ., ಬೆಳ್ತಂಗಡಿಯ ಎನ್. ಜಯಪ್ರಕಾಶ್ ಶರ್ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮತ್ತೆ ವಸಂತ ಕಥಾ ಸಂಕಲನದ ಕಥೆಗಾರ್ತಿ ಜಯಲಕ್ಷ್ಮಿ ತಿಳಿಸಿದ್ದಾರೆ.