ಮಡಿಕೇರಿ ಜ.22 NEWS DESK : ಜಾರ್ಕಂಡ್ ನಲ್ಲಿ ಜ.29 ರಿಂದ ಫೆ.2ರವರೆಗೆ ನಡೆಯಲಿರುವ 19 ವರ್ಷದೊಳಗಿನ ರಾಷ್ಟ್ರೀಯ ಬಾಲಕರ ಹಾಕಿ ತಂಡಕ್ಕೆ ಕೊಡಗಿನ ಕುಂಭಗೌಡನ ವಿ.ವಿಶ್ವಜಿತ್ ಹಾಗೂ ಪೂಜಿತ್ ರವಿ ಕುಂದಳ್ಳಿ ಆಯ್ಕೆಯಾಗಿದ್ದಾರೆ. ವಿಶ್ವಜಿತ್ ಕುಂಭಗೌಡನ ಮಕ್ಕಂದೂರು ಗ್ರಾಮದ ಕುಂಭಗೌಡನ ವಿನೋದ್ ಕುಮಾರ್ ಹಾಗೂ ಕುಂಭಗೌಡನ ಜಲಜಾಕ್ಷಿ ದಂಪತಿಯ ಪುತ್ರ. ಪೂಜಿತ್ ರವಿ ಕುಂದಳ್ಳಿ ಸೋಮವಾರಪೇಟೆಯ ಕುಂದಳ್ಳಿ ಗ್ರಾಮದ ರವಿ (ರುದ್ರಪ್ಪ, ಮಾಜಿ ಸೈನಿಕ) ಹಾಗೂ ಅಶ್ವಿನಿ ದಂಪತಿಯ ಪುತ್ರ.