ಮಡಿಕೇರಿ ಜ.22 NEWS DESK : ಕುಶಾಲನಗರ ಉಪವಿಭಾಗ, ಕೂಡಿಗೆ ಶಾಖಾ ವ್ಯಾಪ್ತಿಯ, ಎಫ್1 ಹೆಬ್ಬಾಲೆ ಫೀಡರ್ ಮಾರ್ಗದಲ್ಲಿ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುವುದರಿಂದ ಜನವರಿ, 23 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಎಫ್1 ಹೆಬ್ಬಾಲೆ ಫೀಡರ್ನ ಹೆಬ್ಬಾಲೆ, ಕಣಿವೆ, ಹುಲುಸೆ, ಮರೂರು, ಹಳೆಕೋಟೆ, ಹೊಸಕೋಟೆ, ಅಂದಾನಿಪುರ, ಎಫ್15 ಭುವನಗಿರಿ ಫೀಡರ್ನ ಮಲ್ಲೇನಹಳ್ಳಿ, ಮದಲಾಪುರ, ಹುದುಗೂರು, ಭುವನಗಿರಿ, ಸೀಗೆಹೊಸೂರು, ಯಲಕನೂರು ಎಫ್6 ಕೂಡಿಗೆ ಫೀಡರ್ನ ಕೂಡಿಗೆ, ಇಂಡಸ್ಟ್ರೀಯಲ್ ಏರಿಯಾ, ಹಳೆಕೂಡಿಗೆ, ಕೂಡ್ಲೂರು, ಕೂಡುಮಂಗಳೂರು ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.