ಚೆಟ್ಟಳ್ಳಿ ಜ.23 NEWS DESK : ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಯ್ಕೆಯಾದ ಹೊದ್ದೂರು ಗ್ರಾ.ಪಂ ಅಧ್ಯಕ್ಷ ಹೆಚ್.ಎ.ಹಂಸ ಅವರನ್ನು ಚೆಟ್ಟಳ್ಳಿ ಸಾಂತ್ವನ ಸಮಿತಿ ಮತ್ತು ಜಮಾಅತ್ ವತಿಯಿಂದ ಸನ್ಮಾನಿಸಲಾಯಿತು. ಚೆಟ್ಟಳ್ಳಿ ಮದರಸ ಸಭಾಂಗಣದಲ್ಲಿ ಸಾಂತ್ವನ ಸಮಿತಿ ಮತ್ತು ಜಮಾಅತ್ ಪ್ರಮುಖರು ಸನ್ಮಾನಿಸಿ, ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತಾನಾಡಿದ ಹಂಸ, ಬಡವರ ಸೇವೆಗೆ ಸದಾ ಸಿದ್ದನಿರುತ್ತೇನೆಂದರು. ಕೊಡಗಿನ ಎಲ್ಲಾ ಗ್ರಾ.ಪಂಗಳು ಉತ್ತಮಕಾರ್ಯವನ್ನು ನಿರ್ವಹಿಸಯವ ಮೂಲಕ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸುವಂತಾಗಬೇಕೆಂದರು. ಸಮಿತಿ ಅಧ್ಯಕ್ಷ ಹಂಸ ತ್ಯಾಗತೂರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಹಮೀದ್ ಕಬಡಕೇರಿ, ಉಪಾಧ್ಯಕ್ಷ ಮೂಸಾ, ಹನಿಫ್ ತ್ಯಾಗತ್ತೂರು, ಅಲಿ ಕಂಡಕರೆ, ಅನೀಫ್, ಶಕೀರ್ ಪೊನ್ನತಮೊಟ್ಡೆ ಮುಂತಾದವರು ಪಾಲ್ಗೊಂಡಿದರು. ಉಪಾಧ್ಯಕ್ಷ ಮೊಹಮ್ಮದ್ ರಫಿ ಸ್ವಾಗತಿಸಿದರು. ಜುಬೈರ್ ಚೆಟ್ಟಳ್ಳಿ ಹಂಸ ಅವರ ಕಿರುಪರಿಚಯ ಮಾಡಿದರು.