ಮಡಿಕೇರಿ NEWS DESK ಜ.23 : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ಕನಿಷ್ಟ ವೇತನ ರೂ.31 ಸಾವಿರ ಪಾವತಿ ಮಾಡಬೇಕು, ನೇರವಾಗಿ ಇಲಾಖೆಯಿಂದ ವೇತನ ನೀಡಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಸಿಬ್ಬಂದಿಗಳ ಸಂಖ್ಯೆ ಕಡಿತ ಆದೇಶ ರದ್ದು ಮಾಡಬೇಕು, ಜೀತ ಪದ್ದತಿಯಿಂದ ಮುಕ್ತಿಗೊಳಿಸಬೇಕು, ಬೀದರ್ ಮಾದರಿಯ ಸಹಕಾರ ಸಂಘವನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಣೆ ಮಾಡಬೇಕು, ವಾರದ ರಜೆ, ಬಾಕಿ ಸಂಬಳ, ಹೆರಿಗೆ ರಜೆಯ ವೇತನವನ್ನು ನೀಡಬೇಕು, ಕೆಲಸದ ಸಮಯವನ್ನು ನಿಗದಿಪಡಿಸಬೇಕು, ಇಎಸ್‌ಐ ಮತ್ತು ಪಿಎಫ್ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಪ್ರತಿಭಟನಾಕಾರು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಸಲ್ಲಿಸಿದರು. ಸಮಿತಿಯ ಅಧ್ಯಕ್ಷ ಜಿ.ಕೆ.ದಿನೇಶ್, ಉಪಾಧ್ಯಕ್ಷ ಹೆಚ್.ಎಸ್.ಯೋಗೇಶ್, ಜಿಲ್ಲಾ ಮುಖಂಡರುಗಳಾದ ಎಸ್.ಟಿ.ಸೌಭಗ್ಯ, ಪ್ರೇಮ, ನೇತ್ರ, ಪ್ರೇಮ, ತಾಲ್ಲೂಕು ಮುಖಂಡರುಗಳಾದ ವಸಂತಿ, ರೂಪ, ಮಹೇಶ್, ಭಾಗ್ಯಮ್ಮ, ಭಾನುಮತಿ, ಪುಷ್ಪ, ರತ್ನಮ್ಮ, ಜ್ಯೋತಿ ಸೇರಿದಂತೆ ಪದಾಧಿಕಾರಿಗಳು ಹಾಗೂ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.