ಮಡಿಕೇರಿ NEWS DESK ಜ.26 : ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಸಭೆ ಕಾಲೇಜಿನ ನ್ಯಾಕ್ ಕೊಠಡಿಯಲ್ಲಿ ನಡೆಯಿತು. ಹಳೆ ವಿದ್ಯಾರ್ಥಿ ಸಂಘದ ಬೊಳ್ಳಜಿರ ಬಿ.ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಲೇಜಿನ ಅಭಿವೃದ್ಧಿ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೋ ಮೇಜರ್ ರಾಘವ ಮಾತನಾಡಿ ಕಾಲೇಜಿನ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿ ಸಂಘದ ಕೊಡುಗೆ ಬಹಳಷ್ಟು ಇದೆ. ಕಾಲೇಜಿನ ಕುಂದುಕೊರತೆಗಳಿಗೆ ಸಂಘವು ಬಹಳಷ್ಟು ಸ್ಪಂದನ ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಮೂಲಕ ಸ್ನೇಹ ಸಮ್ಮಿಲನದ ಮೂಲಕ ಎಲ್ಲರನ್ನೂ ಒಟ್ಟುಗೂಡಿಸುವಂತ ಸುಂದರ ಕಾರ್ಯಕ್ರಮಕ್ಕೆ ಮನ್ನುಡಿ ಬರೆಯಲಾಯಿತು. ಕಾಲೇಜನ್ನು ಎಲ್ಲಾ ರೀತಿಯಿಂದಲೂ ಅಭಿವೃದ್ಧಿಪಡಿಸುವಲ್ಲಿ ನಮ್ಮ ಹಳೆ ವಿದ್ಯಾರ್ಥಿ ಸಂಘದ ಸಹಕಾರ ಸದಾ ಇರುತ್ತದೆ ಹಾಗು ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸಿದ ವಿದ್ಯಾರ್ಥಿಗಳು ಈಗಿನ ಹಳೆ ವಿದ್ಯಾರ್ಥಿ ಸಂಘದ ಜೊತೆ ಕೈ ಜೋಡಿಸಬೇಕು ಎಂದು ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮನವಿ ಮಾಡಿದರು. ಸಂಘದ ವತಿಯಿಂದ ನಡೆದ ಕಾರ್ಯಕ್ರಮಗಳ ವರದಿಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಮಂಡಿಸಿದರು. ಕಾಲೇಜಿನಲ್ಲಿ ಆಗಬೇಕಿರುವ ಇತರ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ಕೆಲಸಗಳ ವಿಚಾರಗಳ ಕುರಿತು ಸರ್ವ ಸದಸ್ಯರು ಚರ್ಚಿಸಿ ತೀರ್ಮಾನ ಕೈಗೊಂಡರು. ನಿರ್ದೇಶಕಿ ಪೆಬ್ಬಟ್ಟಿರ ಶೀತಲ್ ಕಾರ್ಯಪ್ಪ ಪ್ರಾರ್ಥಿಸಿ, ಪೇರಿಯಂಡ ಯಶೋಧಾ ಸರ್ವರನ್ನೂ ಸ್ವಾಗತಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಬೊಟ್ಟಂಗಡ ಗಣಪತಿ. ನಿರ್ದೇಶಕರಾದ ಮಾಗುಲು ಲೋಹಿತ್, ಬಲ್ಯದ ಚರಣ್, ಐಚಂಡ ರಶ್ಮಿ ಮೇದಪ್ಪ, ಚೀಯಕಪೂವಂಡ ಸಚಿನ್ ಪೂವಯ್ಯ, ಕರವಂಡ ಸೀಮಾ ಗಣಪತಿ, ಬಿ. ಎನ್ ವಿಠಲ್ ತಿಮ್ಮಯ್ಯ, ಖುರ್ಷಿದಾ ಭಾನು, ನಂದಿನೆರವಂಡ ಅಪ್ಪಯ್ಯ, ಹೇಮಾವತಿ ಬಿ.ಎನ್ ಹಾಜರಿದ್ದರು.