ಮಡಿಕೇರಿ ಜ.31 NEWS DESK : ಅಲ್ಲಿ ಭಾಷಣ ಇರಲಿಲ್ಲ. ವೇದಿಕೆಯೂ ಇರಲಿಲ್ಲ, ಅಲ್ಲಿ ಕೇಳಿ ಬಂದದ್ದು ಸುಮಧುರ ಭಜನೆ, ಕೀತ೯ನೆಗಳು ಮಾತ್ರ. ಎರಡೂವರೆ ಗಂಟೆ ಕಾಲ ಕಲಾಪ್ರೇಮಿಗಳ ಮನಸೂರೆಗೊಂಡ ಈ ಕಾಯ೯ಕ್ರಮದ ಮೂಲಕ ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ವತಿಯಿಂದ ಗಾಂಧೀಜಿಯವರಿಗೆ ಗೀತನಮನ ಸಮಪಿ೯ಸಲಾಯಿತು. ಇಂಥದ್ದೊಂದು ವಿಶಿಷ್ಟ ಕಾಯ೯ಕ್ರಮಕ್ಕೆ ಮಡಿಕೇರಿಯ ಗಾಂಧಿ ಭವನ ಸಾಕ್ಷಿಯಾಯಿತು. ಗಾಂದೀಜಿಯವರಿಗೆ ಹಾಡುಗಳ ಮೂಲಕ ಗೌರವ ನಮನ ಸಲ್ಲಿಸುವ ನಿಟ್ಟಿನಲ್ಲಿ ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್, ಸಂಸ್ಥೆಯು ಕೊಡಗು ಜಾನಪದ ಪರಿಷತ್, ಜಿಲ್ಲಾ ವಾತಾ೯ ಮತ್ತು ಸಾವ೯ಜನಿಕ ಸಂಪಕ೯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2 ನೇ ವಷ೯ದ ಗಾಂಧೀಜಿ ಗೀತ ನಮನ ಸತ್ಯಂ ಶಿವಂ ಸುಂದರಂ ಕಾಯ೯ಕ್ರಮ ಅನೇಕ ಕಲಾವಿದರ ಕಲಾಪ್ರೆತಿಬೆ ಬೆಳಕಿಗೆ ತರಲು ಸಹಕಾರಿಯಾಯಿತು. ಕಾಯ೯ಕ್ರಮವನ್ನು ಹಿರಿಯ ಲೇಖಕಿ ರಾಜಲಕ್ಷ್ಮಿ ಗೋಪಾಲಕೃಷ್ಣ, ಅಂಬೆಕಲ್ ಸುಶೀಲಾ ಕುಶಾಲಪ್ಪ, ಅಲೆಮಾಡ ಚಿತ್ರಾ ನಂಜಪ್ಪ ದೀಪಬೆಳಗಿಸಿ ಉದ್ಘಾಟಿಸಿದರು. ನಂತರ ಎರಡೂವರೆ ಗಂಟೆ ಕಾಲ ಅನೇಕ ಗಾಯಕ, ಗಾಯಕಿಯರು ದೇಶಭಕ್ತಿಗೀತೆ, ಭಜನೆ, ಕೀತ೯ನೆಗಳ ಮೂಲಕ ಕೇಳುಗರನ್ನು ಸಮ್ಮೋಹನಗೊಳಿಸಿದರು. ಶೃತಿ, ಲಯ ತಂಡದ ವೀಣಾ ಹೊಳ್ಳ, ಮಮತಾ ಶಾಸ್ತ್ರೀ, ಗೀತಾ ಸಂಪತ್ ಕುಮಾರ್, ಸುಧಾ ಎಸ್ ಪ್ರಸಾದ್, ತನುಶ್ರೀ, ಆರತಿ, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ.ಅನಂತಶಯನ, ಹಿರಿಯ ಕಲಾವಿದ ಜಿ. ಚಿದ್ವಿಲಾ್ಸ್, ಪ್ರತಿಭಾ ಮಧುಕರ್, ಸ್ಕಂದ, ಸಪ್ನಾ ಮಧುಕರ್, ಕೆ.ಜಯಲಕ್ಷ್ಮಿ, ಕಾವ್ಯಶ್ರೀ ಕಪಿಲ್, ಸಂಧ್ಯಾಚಿದ್ವಿಲಾಸ್, ಚಿತ್ರಾ ನಂಜಪ್ಪ, ವಂದನಾ ಪೊನ್ನಪ್ಪ, ಜಾನಪದ ಯುವಬಳಗದ ಸಂಚಾಲಕಿ ಗಾಯತ್ರಿ ಚೆರಿಯಮನೆ, ಪ್ರತಿಮಾರೈ, ಚಿತ್ರಾ ಆಯ೯ನ್, ಪ್ರಜ್ಞ ಕಲಾಕೇಂದ್ರದ ಜೀವಿಕ, ಮಿನುಗು, ಲಷಿತ, ರೈ, ಪೂವಿ೯, ಸಂಜನಾ, ವಷ೯ ಬಿ.ಡಿ., ಇಂತರ, ಸಾಂಚಿ, ಮೀನಾಕ್ಷಿ, ರೇಷ್ಮಾ ಸೇರಿದಂತೆ ಅನೇಕರು ವಿಭಿನ್ನವಾದ ಹಾಡುಗಳ ಮೂಲಕ ಮನ ಸೆಳೆದರು. ಕಾಯ೯ಕ್ರಮ ಸಂಘಟಕ ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರನ್ನು ಗಾಂಧಿ ಭವನದಲ್ಲಿಯೇ ಸ್ಮರಿಸಿಕೊಳ್ಳುವ ನಿಟ್ಟಿನಲ್ಲಿ ಅವರಿಗೆ ಇಷ್ಟವಾಗಿದ್ದ ಹಾಡುಗಳ ಮೂಲಕ ವಿಭಿನ್ನ ರೀತಿಯಲ್ಲಿ ಗೀತ ನಮನ ಸಲ್ಲಿಸಲಾಗುತ್ತಿದೆ. ಜತೆಗೇ ಮಡಿಕೇರಿಯಲ್ಲಿರುವ ಹಾಡುಗಾರರ ಸಮ್ಮಿಲನವೂ ಈ ಕಾಯ೯ಕ್ರಮದ ಮೂಲಕ ಆಗಿದೆ ಎಂದರು. ಜಿಲ್ಲಾ ವಾತಾ೯ ಮತ್ತು ಸಾವ೯ಜನಿಕ ಸಂಪಕ೯ ಇಲಾಖಾಧಿಕಾರಿ ಚಿನ್ನಸ್ವಾಮಿ, ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಖಜಾಂಚಿ ಎ.ಕೆ. ನವೀನ್, ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾಯ೯ದಶಿ೯ ಎಸ್.ಐ. ಮುನೀರ್ ಅಹಮ್ಮದ್, ಖಜಾಂಜಿ ಎಸ್.ಎಸ್.ಸಂಪತ್ ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ. ಪಿ. ರಮೇಶ್, ಸೇರಿದಂತೆ ಅನೇಕರು ಕಾಯ೯ಕ್ರಮದಲ್ಲಿ ಹಾಜರಿದ್ದರು.