ಸೋಮವಾರಪೇಟೆ ಫೆ.5 NEWS DESK : ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಫೆ.7 ಮತ್ತು 8 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಮಕ್ಕಳ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಸ್ಪರ್ಧೆಯ ಪ್ರೌಢಶಾಲಾ ವಿಭಾಗದ ಗಝಲ್ ಗಾಯನ ಸ್ಪರ್ಧೆಗೆ ಸೋಮವಾರಪೇಟೆ ಸಂತ ಜೋಸೆಫರ ಪ್ರೌಢಶಾಲೆಯ ವಿದ್ಯಾರ್ಥಿನಿ ಲಿಶ್ಮ ಡಯಾಸ್ ಆಯ್ಕೆಯಾಗಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಜಿಲ್ಲಾಮಟ್ಟದ ಗಝಲ್ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವ ಲಿಶ್ಮ ಡಯಾಸ್, ಕುಶಾಲನಗರ ಪಟ್ಟಣದ ಶಿಕ್ಷಕ ದಂಪತಿ ಹ್ಯೂಬರ್ಟ್ ಡಯಾಸ್ ಮತ್ತು ಡಾ.ಸವರಿನ್ ಡಿ’ಸೋಜ ಅವರ ಪುತ್ರಿಯಾಗಿದ್ದಾಳೆ ಎಂದು ಶಾಲಾ ಮುಖ್ಯ ಶಿಕ್ಷಕ ಹ್ಯಾರಿ ಮೋರಸ್ ತಿಳಿಸಿದ್ದಾರೆ.











