


ಪ್ರಯಾಗ್ ರಾಜ್ NEWS DESK ಫೆ.5 : ಉತ್ತರ ಪ್ರದೇಶದ ಪ್ರಯಾಗ್ ರಾಜ್ ದಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾಕುಂಭಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಷ್ಟಮಿ ದಿನವಾದ ಇಂದು ಸಂಗಮ ಘಾಟ್ ನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು. ಪವಿತ್ರ ಗಂಗಾ ಜಲಕ್ಕೆ ಅರ್ಘ್ಯ ಬಿಟ್ಟು ಸುತ್ತು ಬಂದರು. ನಂತರ ಕಣ್ಣುಮುಚ್ಚಿ ನೀರಿನ ಮಧ್ಯೆ ನಿಂತು ರುದ್ರಾಕ್ಷಿ ಮಾಲೆ ಹಿಡಿದುಕೊಂಡು ಧ್ಯಾನ ಮಾಡಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜೊತೆಯಲ್ಲಿದ್ದರು.