
ನಾಪೋಕ್ಲು ಫೆ.11 NEWS DESK : ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ(ಪಕ್ಷ) ಜಯಗಳಿಸಿದ ಹಿನ್ನೆಲೆಯಲ್ಲಿ ನಾಪೋಕ್ಲುವಿನ ಬಿಜೆಪಿ ಶಕ್ತಿ ಕೇಂದ್ರದಿಂದ ವಿಜಯೋತ್ಸವ ಆಚರಿಸಲಾಯಿತು. ಪಟ್ಟಣದ ಬಸ್ ನಿಲ್ದಾಣದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಕಾರ್ಯಕರ್ತರು ಪಕ್ಷದ ಬಾವುಟವನ್ನು ಹಿಡಿದು ಜೈಕಾರ ಕೂಗಿದರು. ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಳಿಯಂಡ ಅಂಬಿ ಕಾರ್ಯಪ್ಪ ನೇತೃತ್ವದಲ್ಲಿ ಜರುಗಿದ ವಿಜಯೋತ್ಸವದಲ್ಲಿ ಅಂಬಿ ಕಾರ್ಯಪ್ಪ ಹಾಗೂ ಹಿಂದುಳಿದ ವರ್ಗ ಮೋರ್ಚಾದ ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ಬಿ.ಎಂ.ಪ್ರತೀಪ ಮಾತನಾಡಿ, ದೆಹಲಿಯಲ್ಲಿ 70 ಸ್ಥಾನಗಳ ಪೈಕಿ 47 ಸ್ಥಾನಗಳನ್ನು ಗಳಿಸಿ 27 ವರ್ಷಗಳ ಬಳಿಕ ಅಧಿಕಾರ ದೊರೆತಿದೆ. ಈ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿ. ಈ ಸಂದರ್ಭ ಬಿಜೆಪಿ ಪಕ್ಷದ ಪ್ರಮುಖರಾದ ಕೇಟೋಳಿರ ಹರೀಶ್ ಪೂವಯ್ಯ, ಶಿವಚಳಿಯಂಡ ಜಗದೀಶ್, ಎಂ.ಎಂ.ನರೇಂದ್ರ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಅರೆಯಡ ರತ್ನ ಪೆಮ್ಮಯ್ಯ, ಟಿ.ಎ.ಮಿಟ್ಟು, ನಾಯಕಂಡ ದೀಪು, ಪಟ್ರಪಂಡ ನಿರನ್, ಕಂಗಂಡ ಜಾಲಿ ಪೂವಪ್ಪ, ಚಿಯಕ್ ಪೂವಂಡ ರಘು, ಪೆÇರ್ಕೊಂಡ ಅನಿಲ್, ಬಿದ್ದಾಟಂಡ ಸಂಪತ್, ಕೇಟೋಳಿರ ಫಿರೋಜ್ ಗಣಪತಿ, ಕರ್ತಮಾಡ ಡಿಲನ್, ಕಸ್ತೂರಿ, ಬಿ.ಕೆ.ಪೂವಿ, ನಂಜಪ್ಪ, ಪುತ್ರ ತಿಮ್ಮಯ್ಯ, ಪೂವಯ್ಯ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.









