
ನಾಪೋಕ್ಲು ಫೆ.11 NEWS DESK : ಇಂದಿನ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ತರಬೇತಿಗಳು ಅತೀ ಅಗತ್ಯ. ಫಲಿತಾಂಶ ಉತ್ತಮ ಪಡಿಸಲು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕಾರ್ಯವೈಖರಿಯನ್ನು ಕೊಡಗು ಜಿಲ್ಲೆಗೆ ವಿಸ್ತರಿಸಿರುವುದು ಶ್ಲಾಘನೀಯ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಹೇಳಿದರು. ಹೊದವಾಡ ರಫೆಲ್ಸ್ ಶಿಕ್ಷಣ ಸಂಸ್ಥೆ ಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ( ಮೀಫ್ ) ವತಿಯಿಂದ ಆಯೋಜಿಸಲಾಗಿದ್ದ ನೂತನ ಕೊಡಗು ಘಟಕದ ಉದ್ಘಾಟನೆ ಮತ್ತು ಎಸ್ ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ವಿಶೇಷ ಪಾಸಿಂಗ್ ಪ್ಯಾಕೇಜ್ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಾಗಾರವನ್ನು ಉದ್ಘಾಟಿಸಿದ ಕೊಡಗು ಜಿಲ್ಲೆ ಡಿ.ಡಿ.ಪಿ.ಐ ರಂಗಾಧಾಮಪ್ಪ ಮೀಫ್ ನೀಡುವ ತರಬೇತಿಗಳು ಕೊಡಗು ಜಿಲ್ಲೆಯ ಫಲಿತಾಂಶಕ್ಕೆ ಸಹಕಾರಿ ಎಂದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಗಳ ಗೂನಡ್ಕದ ಟಿ.ಎಂ.ಶಾಹಿದ್ ತೆಕ್ಕಿಲ್, ಭಾಗವಹಿಸಿ ಮಾತನಾಡಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಅವರ ಕಾಳಜಿ ಪೆÇ್ರೀತ್ಸಾಹ ಮತ್ತು ಬೆಂಬಲ ಈ ಸಂಸ್ಥೆಯ ಕೊಡಗು ಜಿಲ್ಲೆಯ ಉದ್ಘಾಟನಾ ಸಮಾರಂಭ ಕೊಡಗಿನ ಚರಿತ್ರೆಗೆ ಸೇರುವಂತದ್ದು. ಶಿಕ್ಷಣ ಸಂಸ್ಥೆ ಪ್ರಾರಂಭಿಸಲು ನಡೆಸಲು ಕಷ್ಟ ಇದ್ದರೂ ಕಾಳಜಿ ವಹಿಸಿ ವಿದ್ಯಾಭ್ಯಾಸದಲ್ಲಿ ಹಿಂದೆ ಇರುವ ನಮ್ಮ ಸಮುದಾಯ ಶಿಕ್ಷಣಕ್ಕೆ ಮದರಸ ಜೊತೆ ಹೆಚ್ಚು ಒತ್ತು ಕೊಟ್ಟು ಶಾಲಾ ಕಾಲೇಜುಗಳನ್ನು ಪ್ರಾರಂಭಿಸಿ ಕೊಡಗು ಜಿಲ್ಲೆಗೆ ರಾಜ್ಯಕ್ಕೆ ದೇಶಕ್ಕೆ ಮಾದರಿ ಸತ್ಪ್ರಜೆಗಳನ್ನು ನಿರ್ಮಿಸಲು ಕೊಡಗು ಜಿಲ್ಲಾ ಮೀಫ್ ಸಂಸ್ಥೆ ಸಹಕಾರಿಯಾಗಲಿ ಅಲ್ಲದೆ ಮುಸ್ಲಿಂ ಶಿಕ್ಷಣ ಸಂಸ್ಥೆ ದೇಶಕ್ಕೆ ಮತ್ತು ಸಮುದಾಯಕ್ಕೆ ಅಗತ್ಯ ಇದೆ ಹೆಚ್ಚು ಜನವಾಸ ಇರುವ ಬಡ ಜನರು ಇರುವಲ್ಲಿ ಶಿಕ್ಷಣ ಸಂಸ್ಥೆ ನಿರ್ಮಿಸಿ ಎಂದು ಅಹ್ವಾನ ನೀಡಿದರು. ಎಸ್.ಎಸ್.ಎಲ್ ಸಿ ಫಲಿತಾಂಶ ಹೆಚ್ಚಿಸಲು ನಿಧಾನ ಕಲಿಕಾ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳ ಎರಡು ದಿವಸಗಳ ವಿಶೇಷ ಕಾರ್ಯಾಗಾರವನ್ನು ವಿಷಯವಾರು ಪರಿಣಿತ ರಾದ ಅಶ್ರಫ್ ಮಂಗಳೂರು, ಶರೀಫ್ ನಾರಾವಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಬೇತಿ ನೀಡಿದರು. ಅಧ್ಯಕ್ಷತೆಯನ್ನು ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ವಹಿಸಿದರು. ಉಪಾಧ್ಯಕ್ಷ ಕೆ.ಎಂ.ಮುಸ್ತಾಫ ಸುಳ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಕಾವೇರಿ ಕಾಲೇಜು ಗೋಣಿಕೊಪ್ಪ ಉಪನ್ಯಾಸಕ ಡಾ. ಲೆಫ್ಟಿನೆಂಟ್ ಅಕ್ರ, ಮೀಫ್ ಸದಸ್ಯರಾದ ಪರ್ವೆಝ್ ಅಲಿ, ಶೇಖ್ ರಹ್ಮತುಲ್ಲಾಹ್, ಮೊಹಮ್ಮದ್ ಶಹಾಮ್, ವೇದಿಕೆಯಲ್ಲಿ ಹೊದ್ದುರು ಗ್ರಾಮ ಪಂಚಾಯತ್ ಅಧ್ಯಕ್ಷ ಎಚ್.ಎ.ಹಂಝ, ಕೊಡಗು ಜಿಲ್ಲಾ ವಖ್ಫ್ ಮಾಜಿ ಅಧ್ಯಕ್ಷ ಯಾಕೂಬ್, ಗ್ರಾಮ ಪಂಚಾಯತ್ ಸದಸ್ಯ ಮೊಯ್ದು, ಮೀಫ್ ದ.ಕ. ಮತ್ತು ಉಡುಪಿ ಜಿಲ್ಲೆಗಳ ಪದಾಧಿಕಾರಿಗಳಾದ ಶಹಾಂ ಮೂಡಬಿದ್ರಿ, ರಹ್ಮತುಲ್ಲ ಬುರುಜ್, ಮೀಫ್ ಕೊಡಗು ಜಿಲ್ಲಾ ಘಟಕ ಪದಾಧಿಕಾರಿಗಳಾದ ಮಹಬೂಬ್ ಮಾಸ್ತರ್, ಹನೀಫ್ ಮಡಿಕೇರಿ, ಬಶೀರ್ ಕೆ. ಟಿ., ಮಣಿ ಮಾಸ್ಟರ್ ಸಿದ್ದಾಪುರ,ಅಸ್ಮಾ ಮೌಂಟನ್ ವ್ಯೂ, ವಿರಾಜಪೇಟೆ, ಮೀಫ್ ಸಲಹಾ ಸಮಿತಿ ಸಲೀಂ ನಾಪೋಕ್ಲು, ಮಹಮ್ಮದ್ ಕೊಟ್ಟಮುಡಿ, ಮೀಫ್ ಕೊಡಗು ಜಿಲ್ಲಾಧ್ಯಕ್ಷ ಕೆ. ಎಂ. ಶಾದಲಿ ಸ್ವಾಗತಿಸಿ, ಶಾರಿಕ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು ಪರ್ವೀಜ್ ಅಲಿ ವಂದಿಸಿದರು. ನಾಪೋಕ್ಲು, ವಿದ್ಯಾ ಸಂಸ್ಥೆಗಳ ಸುಮಾರು 165 ರಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ : ದುಗ್ಗಳ ಸದಾನಂದ.









