
ಸೋಮವಾರಪೇಟೆ ಫೆ.22 NEWS DESK : ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕಾರಂಜಿ ಇಕೋ ಕ್ಲಬ್ ಮತ್ತು ಸಿಇಇಸಿಒ ಸಂಸ್ಥೆ ಸಹಯೋಗದಲ್ಲಿ ಇಂಧನ ಉಳಿತಾಯದ ಬಗ್ಗೆ ಜಾಗೃತಿ ಜಾಥಾ ನಡೆಯಿತು. ಶಿಕ್ಷಣಾಧಿಕಾರಿ ಭಾಗ್ಯಮ್ಮ ಜಾಥಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ಇಂಧನ ಮುಗಿದು ಹೋಗುವ ಖನಿಜವಾಗಿದ್ದು, ಅದನ್ನು ಇತಿಮಿತಿಯಲ್ಲಿ ಬಳಸಿದಲ್ಲಿ ಮಾತ್ರ ನಮ್ಮ ಮುಂದಿನ ತಲೆಮಾರಿಗೂ ಉಳಿಸಬಹುದು. ಪರಿಸರಕ್ಕೆ ಪೂರಕವಾದ ಇಂಧನಗಳನ್ನು ಬಳಸಿದಲ್ಲಿ ಹವಾಮಾನಕ್ಕೆ ಹೆಚ್ಚಿನ ಅನುಕೂಲವಾಗುವುದು. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು ವಿದ್ಯಾರ್ಥಿಗಳಿಂದ ಜಾಥಾ ನಡೆಯುತ್ತಿದೆ ಎಂದು ಹೇಳಿದರು. ಶಾಲಾ ಆವರಣದಿಂದ ಹೊರಟ ಜಾಥಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಬಿಆರ್‍ಸಿ ಮಂಜೇಶ್, ಪ್ರೌಢಶಾಲಾ ಉಪ ಪ್ರಾಂಶುಪಾಲರಾದ ಹೇಮಲತಾ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಯಶೋಧ, ಸಿಇಇಸಿಒ ಸಂಸ್ಥೆಯ ಹರೀಶ್, ಪ್ರೌಢಶಾಲಾ ಶಿಕ್ಷಕರುಗಳಾದ ಬಿ.ವಿಜಯಕುಮಾರ್, ಶಶಿಧರ್, ಧನ್ಯ, ರಾಜರತ್ನ, ಬಸವರಾಜು, ವೆಂಕಟೇಶ್ ಆರಕ್ಷಕ ಸಿಬ್ಬಂದಿಗಳು ಇದ್ದರು.









