
ಸೋಮವಾರಪೇಟೆ ಫೆ.22 NEWS DESK : ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಸಮಿತಿ ಮತ್ತು ಕ್ರೀಡಾ ಸಮಿತಿ ವತಿಯಿಂದ ಜಾತ್ರೋತ್ಸವದ ಅಂಗವಾಗಿ ಫೆ.24 ಮತ್ತು 25ರಂದು ಮುಕ್ತ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ ಹೇಳಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.25 ರಂದು ಕೊಡಗು ಮತ್ತು ಹಾಸನ ಜಿಲ್ಲಾ ಮಟ್ಟದ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಹೇಳಿದರು. ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ಫೆ.24ರ ಬೆಳಿಗ್ಗೆ 10 ಗಂಟೆಗೆ ಫುಟ್ಭಾಲ್ ಪ್ರಥಮ 1 ಲಕ್ಷ ರೂ.ಗಳ ನಗದು ದಾನಿ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‍ಗೌಡ ಉದ್ಘಾಟಿಸಲಿದ್ದಾರೆ. ಬಹುಮಾನ ದಾನಿಗಳಾದ ಕೂಗೂರು ಗ್ರಾಮದ ಕೆ.ಆರ್.ಅನಿಲ್, ಸಕಲೇಶಪುರ ಶಾಸಕ ಸಿಮೆಂಟ್ ಮಂಜ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂಜಯ್ ಜೀವಿಜಯ, ಉದ್ಯಮಿ ಅರುಣ್ ಕೊತ್ನಳ್ಳಿ, ನಾಪಂಡ ಮುತ್ತಪ್ಪ, ಕೋಟೆಯೂರು ಸಂತೋಷ್, ಚನ್ನಾಪುರ ವಾಣಿ ವೀರೇಶ್, ಬೀಟಿಕಟ್ಟೆ ಎಚ್.ಟಿ.ಮಧು, ಚನ್ನಾಪುರ ಪ್ರದೀಪ್‍ಗಾಂಧಿ, ಬೀಟಿಕಟ್ಟೆ ಮೋಹಿತ್, ಕೋಗೇಕೋಡಿ ಆದರ್ಶ್, ಕರ್ಣ ಕೂಗೇಕೋಡಿ, ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ, ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎಸ್.ನಾಗರಾಜು ಮತ್ತಿತರರು ಭಾಗವಹಿಸಲಿದ್ದಾರೆ. ಫೆ.24ರಂದು ಬೆಳಿಗ್ಗೆ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಕಿರಣ್ ಅವರು, ಶ್ರೀ ನವದುರ್ಗಾ ಪರಮೇಶ್ವರಿ ದೇವಿಗೆ ಜ್ಯೋತಿ ಬೆಳಗುವುದರ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಪಿಡಿಒ ಲಿಖಿತಾ, ಟಿಎಚ್‍ಒ ಡಾ.ಇಂದೂದರ್, ಪಶುವೈದ್ಯಾಧಿಕಾರಿ ಡಾ.ಸತೀಶ್ ಕುಮಾರ್ ಭಾಗವಹಿಸಲಿದ್ದಾರೆ. 10ಗಂಟೆಗೆ ಉಚಿತ ಪಶುಚಿಕಿತ್ಸಾ ಶಿಬಿರ ನಡೆಯಲಿದೆ. ಫೆ.25 ರಂದು ಬೆಳಿಗ್ಗೆ 8 ಗಂಟೆಗೆ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಗುಡ್ಡಗಾಡು ಓಟ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಹಾಸನ, ಕೊಡಗು ಜಿಲ್ಲೆಯ ಮಹಿಳಾ ತಂಡಗಳಿಗೆ ಥ್ರೋಬಾಲ್ ಪಂದ್ಯಾಟ ನಡೆಯಲಿದೆ. ಬಹುಮಾನ ದಾನಿಗಳಾದ ಸುಮಂತ್ ಚಂದ್ರಶೇಖರ್, ಮಧು ಬಾಗೇರಿ, ಗೌಡಳ್ಳಿ ಜಿ.ಟಿ.ಮೋಹನ್ ಕುಮಾರ್, ಹಿರಿಕರ ಪುಷ್ಪ ಸುರೇಶ್, ಗುತ್ತಿಗೆದಾರ ಸಿ.ಈ.ಚೇತನ್, ಮಮತ ಅಶೋಕ್ ಭಾಗವಹಿಸಲಿದ್ದಾರೆ. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸಂಸದ ಯಧುವೀರ್, ಪ್ರಮುಖರಾದ ಡಿ.ಎಂ.ಗೋಪಾಲಕೃಷ್ಣ, ಎಸ್.ಬಿ.ಭರತ್ ಕುಮಾರ್, ಎಚ್.ಆರ್.ಸುರೇಶ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಸಾಧಕರಾದ ಭೂ ಮತ್ತು ಗಣಿ ವಿಜ್ಞಾನಿ ಹಿರಿಕರ ಗ್ರಾಮದ ರೋಜಾ ಧರ್ಮಪ್ಪ, ಪಿಡಿಒ ಲಿಖಿತಾ, ಕೂಗೇಕೋಡಿ ಗ್ರಾಮದ ಹಿರಿಯ ಸಹಕಾರಿ ಕೆ.ಬಿ.ಚಂದ್ರಶೇಖರ್, ಸುಳಿಮಳ್ತೆ ಗ್ರಾಮದ ರಮ್ಯ ಶಂಕರ್‍ಗಣೇಶ್ ಅವರನ್ನು ಸನ್ಮಾನಿಸಲಾಗುತ್ತದೆ. ಫೆ.26ರ ಸಂಜೆ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದೇವಾಲಯ ಆವರಣದಲ್ಲಿ ವೀರಗಾಸೆ ಕುಣಿತ, ರಾತ್ರಿ ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಹೇಳಿದರು. ಅನ್ನಸಂತರ್ಪಣೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಕ್ರೀಡಾಸಮಿತಿ ಅಧ್ಯಕ್ಷ ಎಸ್.ಬಿ.ಗುರುಪ್ರಸಾದ್, ಪದಾಧಿಕಾರಿಗಳಾದ ಸುಮಂತ್ ಕೂಗೂರು, ಸಿ.ಈ.ವೆಂಕಟೇಶ್, ಕೆ.ಜಿ.ದಿನೇಶ್ ಇದ್ದರು. ಇದೇ ಸಂದರ್ಭ ಪದಾಧಿಕಾರಿಗಳು ಟ್ರೋಫಿ ಅನಾವರಣ ಮಾಡಿದರು.









