
ಮಡಿಕೇರಿ ಫೆ.22 NEWS DESK : ಪೆರಾಜೆ ಗ್ರಾಮದ ಕನ್ನಡ ಪೆರಾಜೆಯಲ್ಲಿ ಷರೀಫ್ ಮನೆ ಹತ್ತಿರದಿಂದ ಹಾದು ಹೋಗುವ ಮತ್ತು ಶಾಲೆಯ ಹತ್ತಿರದಿಂದ ಅರಮನೆ ಪಾರೆ ಸಂಪರ್ಕಿಸುವ ರಸ್ತೆ ಕಾಮಗಾರಿ ಪೂರ್ಣಗೊಂಡಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಅನುದಾನದಲ್ಲಿ ಡಾಂಬರೀಕರಣ ಕಾಮಗಾರಿ ನಡೆಯಿತು. ಹಲವು ವರ್ಷದಿಂದ ಅಭಿವೃದ್ಧಿ ಕಾಣದೆ ಇದ್ದ ರಸ್ತೆಯ ಕಾಮಗಾರಿಯನ್ನು ಮುತುವರ್ಜಿ ವಹಿಸಿ ಶಾಸಕರು ಅನುದಾನ ಬಿಡುಗಡೆಗೊಳಿಸಿದ್ದಕ್ಕೆ ಹಾಗೂ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಲು ಸಹಕರಿಸಿದ ಬ್ಲಾಕ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮನು ಪೆರುಮುಂಡ, ವಾರ್ಡ್ ಸದಸ್ಯರಾದ ಸುರೇಶ್ ಪೆರುಮುಂಡ, ಬೂತ್ ಅಧ್ಯಕ್ಷ ಅಬೂಬಕ್ಕರ್, ವಲಯ ಅಧ್ಯಕ್ಷ ಜಯರಾಮ ಹಾಗೂ ಶಿಹಾಬ್ ಪೆರಾಜೆ ಅವರಿಗೆ ಗ್ರಾಮಸ್ಥರು ಧನ್ಯವಾದ ಸಲ್ಲಿಸಿದರು.









