
ಮಡಿಕೇರಿ NEWS DESK ಫೆ.23 : ಗ್ರಾಮೀಣ ಕ್ರೀಡೆಯಾಗಿ ಖ್ಯಾತಿ ಪಡೆಯುತ್ತಿರುವ ಕಬ್ಬಡಿ ಬಗ್ಗೆ ಮಕ್ಕಳಲ್ಲಿ ಹೆಚ್ಚು ಆಸಕ್ತಿ ಮೂಡಿಸುವ ಕಾಯ೯ವಾಗಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ. ನಗರದ ಗಾಂಧಿ ಮೈದಾನದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ರೋಟರಿ ಜಿಲ್ಲೆ 3181 ನಲ್ಲಿ ರೋಟರಿ ಸದಸ್ಯರಿಗಾಗಿ ಮೊದಲ ಬಾರಿಗೆ ಆಯೋಜಿತ ಕಬ್ಬಡಿ ಪಂದ್ಯಾಟ ಉದ್ಠಾಟಿಸಿ ಮಾತನಾಡಿದ ಅವರು, ಇತ್ತೀಚಿನ ವಷ೯ಗಳಲ್ಲಿ ಪ್ರೀಮಿಯರ್ ಲೀಗ್ ಮೂಲಕ ಹೆಸರುವಾಸಿಯಾಗುತ್ತಿರುವ ಕಬ್ಬಡಿ ಬಗ್ಗೆ ಮಕ್ಕಳಲ್ಲಿಯೂ ಆಸಕ್ತಿ ಮೂಡಿಸಿ ಪ್ರೋತ್ಸಾಹ ನೀಡುವಂತಾದಲ್ಲಿ ಗ್ರಾಮೀಣ ಕ್ರೀಡೆಯಾದ ಕಬ್ಬಡಿಗೆ ಹೆಚ್ಚಿನ ಬೆಂಬಲ ದೊರಕಿದಂತಾಗುತ್ತದೆ ಎಂದರು. 120 ವಷ೯ಗಳನ್ನು ಜಾಗತಿಕವಾಗಿ ಸಾಮಾಜಿಕ ಸೇವಾ ಕಾಯ೯ಗಳಲ್ಲಿ ಪೂರೈಸಿರುವ ರೋಟರಿ ಸಂಸ್ಥೆಯು ಸಾಮಾಜಿಕ ಕಳಕಳಿಯೊಂದಿಗೆ ಕ್ರೀಡಾಕ್ಷೇತ್ರದಲ್ಲಿಯೂ ಯೋಜನೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಪ್ರಶಂಶಿಸಿದರು. ರೋಟರಿ ಜಿಲ್ಲೆ 3181 ನ ಗವನ೯ರ್ ವಿಕ್ರಂದತ್ತ ಸಭಾ ಕಾಯ೯ಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ವಾಷಿ೯ಕವಾಗಿ ಆಯೋಜಿಸುತ್ತಾ ಬಂದಿದ್ದ ರೋಟರಿಯು ಇದೀಗ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದಲ್ಲಿಯೇ ಮೊದಲ ಬಾರಿಗೆ ಕಬ್ಬಡಿ ಪಂದ್ಯಾಟ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೋಟರಿ ವತಿಯಿಂದ ಕಂಬಳ ಆಯೋಜಿಸಿ ಯಶಸ್ವಿಯಾಗಿರುವುದನ್ನು ಶ್ಲಾಘಿಸಿದ ವಿಕ್ರಂದತ್ತ, ಕಬ್ಬಡಿಯನ್ನೂ ಪ್ರತೀ ವಷ೯ ರೋಟರಿ ಸದಸ್ಯರಿಗಾಗಿ ಮುಂದಿನ ವಷ೯ಗಳಲ್ಲಿ ಆಯೋಜಿಸಲಾಗುತ್ತದೆ ಎಂದು ಭರವಸೆ ನೀಡಿದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಮಾತನಾಡಿ, ರೋಟರಿ ಮಿಸ್ಟಿ ಹಿಲ್ಸ್ ರೋಟರಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಕಬ್ಬಡಿ ಪಂದ್ಯಾಟ ಆಯೋಜಿಸಿರುವ ದಾಖಲೆಗೆ ಪಾತ್ರವಾಗಿದೆ ಎಂದರು. . ಈ ಮೂಲಕ ರೋಟರಿ ಸದಸ್ಯರಲ್ಲಿ ಕಬ್ಬಡಿ ಪಂದ್ಯಾಟದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಲಾಗಿದೆ ಎಂದೂ ಮಧುಸೂದನ್ ಹೇಳಿದರು. ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ನ ನಿವೖತ್ತ ಜಂಟಿ ಕಾಯ೯ದಶಿ೯ ಹೊಸೂಕ್ಲು ಉತ್ತಪ್ಪ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕಬ್ಬಡಿಯನ್ನು ಪ್ರೋತ್ಸಾಹಿಸು ಅಮೆಚ್ಯೂರ್ ಕಬ್ಬಡಿ ಅಸೋಸಿಯೇಷನ್ ಎಲ್ಲಾ ರೀತಿಯ ಬೆಂಬಲ ನೀಡಲಿದೆ ಎಂದರು. ರೋಟರಿ ಮಿಸ್ಟಿ ಹಿಲ್ಸ್ ನ ಕಬ್ಬಡಿ ಪಂದ್ಯಾವಳಿ ಸಂಚಾಲಕ ಜಯಂತ್ ಪೂಜಾರಿ ಮಾತನಾಡಿ, ಇದೇ ಮೊದಲ ಬಾರಿಗೆ ೋಟರಿ ಸದಸ್ಯರಿಗಾಗಿ ಆಯೋಜಿತ ಕಬ್ಬಡಿ ಪಂದ್ಯಾಟಕ್ಕೆ ಉತ್ತಮ ಸ್ಪಂದನ ದೊರಕಿದೆ. ಆಧುನಿಕ ದಿನಗಳಲ್ಲಿ ಕಬ್ಬಡಿಯಂಥ ಜನಪದ ಕ್ರೀಡೆಗೂ ಪ್ರೋತ್ಸಾಹ ನೀಡಿ ಆ ಕ್ರೀಡೆಯ ಮಹತ್ವವನ್ನು, ಸವಾಲುಗಳನ್ನು ರೋಟರಿ ಸದಸ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಮಿಸ್ಟಿ ಹಿಲ್ಸ್ ಕಬ್ಬಡಿ ಪಂದ್ಯಾವಳಿ ಆಯೋಜಿಸಿದೆ ಎಂದು ಮಾಹಿತಿ ನೀಡಿದರು. ರೋಟರಿ ವಲಯ 6 ರ ಸಹಾಯಕ ಗವನ೯ರ್ ದೇವಣಿರ ಕಿರಣ್, ವಲಯ ಸೇನಾನಿ ಅನಿತಾ ಪೂವಯ್ಯ ವೇದಿಕೆಯಲ್ಲಿದ್ದರು. ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕ ಅನಿಲ್ ಹೆಚ್.ಟಿ. ನಿರೂಪಿಸಿದ ಕಾಯ೯ಕ್ರಮದಲ್ಲಿ ಕಬ್ಬಡಿ ಸಮಿತಿಯ ಜಂಚಿ ಸಂಚಾಲಕ ದುಗ್ಗಳ ಕಪಿಲ್ ಸ್ವಾಗತಿಸಿ, ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಕಟ್ಟೆಮನೆ ಸೋನಜಿತ್ ವಂದಿಸಿದರು. ಗಾಂಧಿ ಮೈದಾನದಲ್ಲಿ ಸುಸಜ್ಜಿತ ರೀತಿಯಲ್ಲಿ ರೂಪಿತವಾದ ಕಬ್ಬಡಿ ಮೈದಾನದಲ್ಲಿ ದಿನವಿಡೀ ರೋಟರಿ ಸದಸ್ಯರ ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. *ರಕ್ತದಾನ ಶಿಬಿರ* ಕೊಡಗು ಜಿಲ್ಲಾ ರೆಡ್ ಕ್ರಾಸ್ , ವಿವೇಕಾನಂದ ಯೂತ್ ಮೂವ್ ಮೆಂಟ್ ಮತ್ತು ಜಿಲ್ಲಾ ರಕ್ತನಿಧಿ ಕೇಂದ್ರದ ವತಿಯಿಂದ ಇದೇ ಸಂದಭ೯ ಆಯೋಜಿತ ರಕ್ತಸಂಗ್ರಹಣಾ ಶಿಬಿರವನ್ನು ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು. ಈ ಸಂದಭ೯ ರೋಟರಿ ಜಿಲ್ಲಾ ಗವನ೯ರ್ ವಿಕ್ರಂದತ್ತ, ರೋಟರಿ ಜಿಲ್ಲಾ ಕಾಯ೯ದಶಿ೯ ರಿತೀಶ್ ಬಾಳಿಗ, ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ. ಅನಂತಶಯನ, ರೆಡ್ ಕ್ರಾಸ್ ಜಿಲ್ಲಾ ಸಭಾಪತಿ ಬಿ.ಕೆ.ರವೀಂದ್ರರೈ, ಉಪಾಧ್ಯಕ್ಷ ಅನಿಲ್ ಹೆಚ್.ಟಿ.ಕಾಯ೯ದಶಿ೯ ಮುರಳಿ, ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಚಾಲಕ ಡಾ.ಚೆರಿಯಮನೆ ಪ್ರಶಾಂತ್, ರಕ್ತನಿಧಿ ಕೇಂದ್ರದ ಅಧಿಕಾರಿ ಡಾ. ಕರುಂಬಯ್ಯ, ಡಾ. ನೀತಾ, ಹಾಜರಿದ್ದರು. 26 ಮಂದಿ ರಕ್ತದಾನ ಮಾಡಿದರು.









