


ಮಡಿಕೇರಿ ಮಾ.11 NEWS DESK : ಕುಶಾಲನಗರ ಕಾವೇರಿ ಜೆ.ಸಿ.ಐ.ಸಂಸ್ಥೆಯ ವತಿಯಿಂದ ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ವಾಟರ್ ಫಿಲ್ಟರ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವೇರಿ ಜೆಸಿಐ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಜೇಸೀ ಜೆ.ಎಫ್.ಪಿ. ಎಸ್.ಎನ್.ರಾಜೇಂದ್ರ ವೈಯಕ್ತಿಕವಾಗಿ ಬಾಲಕಿಯರ ಪ್ರೌಢಶಾಲೆಗೆ ಶಾಲೆಗೆ ಕೊಡುಗೆಯಾಗಿ ನೀಡಿದ ವಾಟರ್ ಫಿಲ್ಟರ್ ಅನ್ನು ಮುಖ್ಯ ಶಿಕ್ಷಕ ಪಿ.ನವೀನ್ ಕುಮಾರ್ ಅವರಿಗೆ ಹಸ್ತಾಂತರಿಸಿದರು. ಸಂಸ್ಥೆಯ ಅಧ್ಯಕ್ಷೆ ತಂಬಂಡ ತೇಜ ದಿನೇಶ್ ಕಾರ್ಯದರ್ಶಿ ಎ.ಸಿ.ಕಾವ್ಯಶ್ರೀ, ಜೇಸೀಗಳಾದ ಎಂ.ಜೆ.ರಜನೀಕಾಂತ್, ಬಿ.ಜಗದೀಶ್, ಶಿಕ್ಷಕರು ಇದ್ದರು.