


ಸುಂಟಿಕೊಪ್ಪ ಮಾ.12 NEWS DESK : ಗೃಹಿಣಿಯರು ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ತೆರಯುವ ಮೂಲಕ ತಿಂಗಳಿಗೆ ಇಂತಿಷ್ಟು ತಮ್ಮ ಖಾತೆಯಲ್ಲಿ ಸಂಗ್ರಹಿಸಿಡುವುದರಿಂದ ತುರ್ತು ಸಂದರ್ಭದಲ್ಲಿ ಉಪಯೋಗವಾಗುತ್ತಿದೆ. ಅಲ್ಲದೇ ಆರೋಗ್ಯ ಸಮಸ್ಯೆಗಳು ಉಲ್ಬಣಿಸಿದಾಗ ವಿಮೆಯಿಂದ ಚಿಕಿತ್ಸೆ ಪಡೆಯಬಹುದೆಂದು ಎಫ್.ಎಲ್.ಸಿ ಅಧಿಕಾರಿ ನಬಿ ಹೇಳಿದರು. ಲೀಡ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಅವಾರ್ಡ್ ಸಂಸ್ಥೆ ವತಿಯಿಂದ ಹೆರೂರು ಗ್ರಾಮದ ಸಮುದಾಯ ಭವನದಲ್ಲಿ ಹಣಕಾಸಿನ ಆರ್ಥಿಕ ಸಪ್ತಾಹ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಬ್ಯಾಂಕ್‍ಗಳಲ್ಲಿ ವ್ಯವಹಾರ ಮಾಡುವುದರಿಂದ ಸರಕಾರದ ಎಲ್ಲ ಯೋಜನೆ, ಸಾಲ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಭವಿಷ್ಯದ ಭದ್ರತೆಗೆ ಮಾಸಿಕ ಆದಾಯದಲ್ಲಿ ಒಂದಷ್ಟು ಹಣವನ್ನು ಉಳಿಸಿ ಆರ್‍ಡಿ ಇತರೆ ಕಟ್ಟುವುದರಿಂದ ನಿಮ್ಮ ಮಕ್ಕಳ ಶಿಕ್ಷಣ, ಮದುವೆ ಇನ್ನಿತರ ಸಂದರ್ಭದಲ್ಲಿ ಉಪಯೋಗ ಬರುತ್ತದೆ ಎಂದು ತಿಳಿಸಿದರು. ಈ ಸಂದರ್ಭ ಆರ್ಥಿಕ ಸಮಾಲೋಚಕರದ ಸಿ.ಜಿ.ಹರೀಶ್ ಇತರರು ಹಾಜರಿದ್ದರು.