


ಮಡಿಕೇರಿ ಮಾ.12 NEWS DESK : ನಗರದ ಜನನಿ ಮಹಿಳಾ ಮಂಡಳಿಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ನಗರದ ರಾಘವೇಂದ್ರ ದೇವಾಲಯದ ಬಳಿಯಿರುವ ಮಹಿಳಾ ಮಂಡಳಿಯ ಸಭಾಂಗಣದಲ್ಲಿ ಮಹಿಳಾ ಮಂಡಳಿಯ ನಿರ್ದೇಶಕರಾದ ಪ್ರೇಮಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಿಳಾ ದಿನಾಚರಣೆ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷರಾದ ರಾಣಿ ಅರುಣ್, ಖಜಾಂಚಿ ಜಯ ಮತ್ತು ಸದಸ್ಯರು ಹಾಜರಿದ್ದರು. ಪ್ರಧಾನ ಕಾರ್ಯದರ್ಶಿ ತಾಯಿರಾ ನಿರೂಪಿಸಿದರು. ಸಾಜಿದ ಸ್ವಾಗತಿಸಿದರು. ರೀಟಾ ಪೂಣಚ್ಚ ವಂದಿಸಿದರು. ಕಾರ್ಯಕ್ರಮದಲ್ಲಿ ಮಂಡಳಿಯ ಸದಸ್ಯರು ಸಿಹಿ ಹಂಚಿ ಸಂಭ್ರಮಿಸಿದರು.