Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*
  • *ಮೇ 12 ರಂದು ಉದ್ಯೋಗ ಮೇಳ*
  • *ಹುದ್ದೆಗೆ ಅರ್ಜಿ ಆಹ್ವಾನ*
  • *ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ
  • *ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*
  • *ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*
  • *ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*
  • *ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*
  • *ರಾಷ್ಟ್ರಮಟ್ಟದ ಸೆಸ್ಟೋಬಾಲ್ ಕ್ರೀಡೆ : ಮೊದಲ ಬಾರಿಗೆ ಚಿನ್ನ ಗೆದ್ದ ಕರ್ನಾಟಕ ತಂಡ : ಕೀರ್ತಿ ತಂದ ಕೊಡಗಿನ ಕ್ರೀಡಾಪಟುಗಳು*
  • *ರಾಷ್ಟ್ರಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ : ಮಡಿಕೇರಿಯ ಅನ್ವಿತ್.ಎಸ್ ಚಾಂಪಿಯನ್*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮುದ್ದಂಡ ಹಾಕಿ ಉತ್ಸವ : ಮಾ.31 ರಂದು ನಡೆದ ಹಾಕಿ ಪಂದ್ಯಾವಳಿಯ ವಿಜೇತ ತಂಡಗಳ ವಿವರ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮುದ್ದಂಡ ಹಾಕಿ ಉತ್ಸವ : ಮಾ.31 ರಂದು ನಡೆದ ಹಾಕಿ ಪಂದ್ಯಾವಳಿಯ ವಿಜೇತ ತಂಡಗಳ ವಿವರ*

ಮಾರ್ಚ್ 31, 20254 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

*ಮೈದಾನ ಸಂಖ್ಯೆ 1* 

ಪುಚ್ಚಿಮಾಡ ಮತ್ತು ಮಂಡೀರ (ಮಾದಪುರ) ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಪುಚ್ಚಿಮಾಡ ತಂಡ 3 ಗೋಲುಗಳನ್ನು ಬಾರಿಸಿ ಮಂಡೀರ ತಂಡವನ್ನು ಪರಬಾವಗೊಳಿಸಿತು. ಪುಚ್ಚಿಮಾಡ ತಂಡದ ಯಶ್ವಿನ್ ಗಣಪತಿ 2 ಹಾಗೂ ಭವನ್ ಬೋಪಣ್ಣ 1 ಗೋಲು ದಾಖಲಿಸಿದರು. ಮಂಡೀರ ತಂಡದ ದ್ಯಾನ್ ದೇವಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಮುಕ್ಕಾಟಿರ (ಮುವತ್ತೊಕ್ಲು) ಮತ್ತು ಚೆಯ್ಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆಯ್ಯಂಡ ತಂಡ ಭರ್ಜರಿ 5 ಗೋಲುಗಳನ್ನು ದಾಖಲಿಸುವ ಮೂಲಕ ಗೆಲುವು ಸಾಧಿಸಿತು. ಚೆಯ್ಯಂಡ ತಂಡದ ನಂದ ನಾಚಪ್ಪ 2, ಪೂವಣ್ಣ ಬಿ., ಅಪ್ಪಚ್ಚು ಹಾಗೂ ಶಂಕರಿ ತಲಾ 1 ಗೋಲು ಬಾರಿಸಿದಿರು. ಮುಕ್ಕಾಟಿರ ಕಾರ್ಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಜನರಾದರು.

ಪುಚ್ಚಿಮಂಡ ಮತ್ತು ಕಾಂಗಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಾಂಗಂಡ ತಂಡ 2-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಕಾಂಗಂಡ ತಂಡದ ಪುನೀತ್ 2 ಗೋಲು ದಾಖಲಿಸಿದರು. ಕಾಂಗಂಡ ತಂಡದ ದೇವಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕುಪ್ಪಂಡ (ನಾಂಗಲ) ಮತ್ತು ಬೊಳ್ಳೆಪಂಡ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಕುಪ್ಪಂಡ ತಂಡ 2-1 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಕುಪ್ಪಂಡ ತಂಡದ ಗೌರವ್ ಗಣಪತಿ 2 ಹಾಗೂ ಬೊಳ್ಳೆಪಂಡ ತಂಡದ ಗ್ಯಾನ್ ಗಣಪತಿ 1 ಗೋಲು ದಾಖಲಿಸಿದರು. ಬೊಳ್ಳೆಪಂಡ ನಿತಿನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಜನರಾದರು.

ಮರ್ಚಂಡ ಮತ್ತು ಮಾಣೀರ ತಂಡಗಳ ನಡುವಿನ ಪಂದ್ಯಾಟದಲ್ಲಿ 5-0 ಗೋಲುಗಳ ಅಂತರದಲ್ಲಿ ಮರ್ಚಂಡ ತಂಡ ಗೆಲುವು ದಾಖಲಿಸಿತು. ಮರ್ಚಂಡ ತಂಡದ ಪಳಂಗಪ್ಪ ಹಾಗೂ ಸುಬ್ರಮಣಿ ತಲಾ 2  ಮತ್ತು ಸಚಿತ್ ಸೋಮಣ್ಣ 1 ಗೋಲು ದಾಖಲಿಸಿದರು. ಮರ್ಚಂಡ ತಂಡದ ದರ್ಶನ್ ಚಂಗಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.

ಗೌಡಂಡ ಮತ್ತು ಪಳೆಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಳೆಯಂಡ 3-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಪಳೆಯಂಡ ತಂಡದ ಸೂರಿ ಸುಬ್ಬಯ್ಯ, ಪಾರ್ತ ಚಿಣ್ಣಪ್ಪ ಹಾಗೂ ಬೋಪಣ್ಣ ಪಿ.ಕೆ., ತಲಾ 1 ಗೋಲು ದಾಖಲಿಸಿದರು. ಗೌಡಂಡ ತಂಡದ ಪೊನ್ನಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.

ಚೆಟ್ಟಿಯಾರಂಡ ಮತ್ತು ಚಿಕ್ಕಂಡ ತಂಡಗಳ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಚೆಟ್ಟಿಯಾರಂಡ ಗೆಲುವು ಸಾಧಿಸಿತು. ಚೆಟ್ಟಿಯಾರಂಡ ತಂಡದ ಬಿನ್ನು ಕಾವೇರಪ್ಪ 1 ಗೋಲು ದಾಖಲಿಸಿದರು. ಚೆಕ್ಕಂಡ ತಂಡದ ಡಾಲು ಮೊಣ್ಣಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.

*ಮೈದಾನ ಸಂಖ್ಯೆ 2*

ನಂದೇಟಿರ ಹಾಗೂ ಕಲ್ಲೇಂಗಡ (ನಾಪೋಕ್ಲು) ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ನಂದೇಟಿರ ತಂಡ 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ನಂದೇಟಿರ ತಂಡದ ಧ್ಯಾನ್ ಮುತ್ತಣ್ಣ ಹಾಗೂ ನಿತೀನ್ ಪೂವಯ್ಯ ತಲಾ 1 ಗೋಲು ದಾಖಲಿಸಿದರು. ಕಲ್ಲೆಂಗಡ ತಂಡದ ಹರ್ಷ ಅಯ್ಯಪ್ಪ 1 ಗೋಲು ಬಾರಿಸಿದರು. ಕಲ್ಲೆಂಗಡ ತಂಡದ ಚೇತನ್ ಮ್ಯಾನ್ ಆಫ್ ದಿ ಮ್ಯಾನ್ ಪ್ರಶಸ್ತಿ ಪಡೆದರು.

ದಾಸಂಡ ಮತ್ತು ಪಾಸುರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ದಾಸಂಡ ತಂಡ 4-0 ಗೋಲುಗಳ ಅಂತರದಿಂದ ಗೆಲುವು ದಾಖಲಿಸಿತು. ದಾಸಂಡ ತಂಡದ ಚಂಗಪ್ಪ ಹಾಗೂ ಆಕಾಶ್ ಅಚ್ಚಯ್ಯ ತಲಾ 2 ಗೋಲು ದಾಖಲಿಸಿದರು. ಪಾಸುರ ತಂಡದ ಕಿಶೋರ್ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.

ಬೊಪ್ಪಂಡ ಮತ್ತು ಕರ್ತುರ ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ 5-1 ಗೋಲುಗಳ ಅಂತರದಿಂದ ಬೊಪ್ಪಂಡ ತಂಡ ಗೆಲುವು ಸಾಧಿಸಿತು. ಬೊಪ್ಪಂಡ ತಂಡದ ವಿಖ್ಯಾತ್ ಮಂದಣ್ಣ ಭರ್ಜರಿ 5 ಗೋಲುಗಳನ್ನು ದಾಖಲಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಕರ್ತುರ ತಂಡದ ಕಾರ್ತಿಕ್ ಪೆಮ್ಮಯ್ಯ 1 ಗೋಲು ದಾಖಲಿಸಿದರು. ಕರ್ತುರ ತಂಡದ ದರ್ಶನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಐಚಂಡ ಮತ್ತು ಮುಡ್ಯೋಳಂಡ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ 1 ಗೋಲುಗಳನ್ನು ಪಡೆಯುವ ಮೂಲಕ ಪಂದ್ಯ ಡ್ರಾ ನಲ್ಲಿ ಮುಕ್ತಾಯವಾಯಿತು. ಐಚಂಡ ತಂಡದ ಪವನ್ ಪೊನ್ನಪ್ಪ ಹಾಗೂ ಮುಡ್ಯೋಳಂಡ ಬ್ರಿಜೇಶ್ ಗಣಪತಿ ತಲಾ 1 ಗೋಲು ಬಾರಿಸಿದರು. ಮುಡ್ಯೋಳಂಡ ನಿರನ್ ನಾಣಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ನಾಟೋಳಂಡ ಮತ್ತು ಕರ್ತಚ್ಚಿರ ತಂಡಗಳ ನಡುವೆ ನಡೆದ ಪಂದ್ಯ ತಲಾ 2 ಗೋಲು ಪಡೆಯುವ ಮೂಲಕ ಡ್ರಾ ಗೊಂಡಿತು. ಟ್ರೈ ಬ್ರೆಕರ್‍ನಲ್ಲಿ ಕರ್ತಚ್ಚಿರ ತಂಡ ಗೆಲುವು ದಾಖಲಿಸಿತು. ಕರ್ತಚ್ಚಿರ ತಂಡದ ಧ್ಯಾನ್ ಪೂಣಚ್ಚ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕರ್ತಚ್ಚಿರ ತಂಡದ ಡ್ಯಾನಿ ಕಾಳಪ್ಪ ಹಾಗೂ ತನುಷ್ ತಮ್ಮಯ್ಯ ತಲಾ 1 ಮತ್ತು ನಾಟೋಳಂಡ ತಂಡದ ಚಿಣ್ಣಪ್ಪ ಹಾಗೂ ಕೀರ್ತನ್ ಪೂವಣ್ಣ 1 ಗೋಲು ದಾಖಲಿಸಿದರು.

ಮೈನಪಂಡ ಮತ್ತು ಕೂಪದಿರ ತಂಡಗಳ ನಡುವಿನ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ಮೈನಪಂಡ ತಂಡ ಗೆಲುವು ದಾಖಲಿಸಿತು. ಮೈನಪಂಡ ತಂಡದ ಚಿಣ್ಣಪ್ಪ 3, ಕೂಪದಿರ ತಂಡದ ಬೋಪಣ್ಣ 2 ಗೋಲು ದಾಖಲಿಸಿದರು. ಕೂಪದಿರ ತಂಡದ ಬೋಪಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಮಲ್ಲಜಿರ ಮತ್ತು ಮಲ್ಲಮಾಡ ತಂಡಗಳ ನಡುವಿನ ಪಂದ್ಯದಲ್ಲಿ 5-2 ಗೋಲುಗಳ ಅಂತರದಲ್ಲಿ ಮಲ್ಲಮಾಡ ತಂಡ ಗೆಲುವು ದಾಖಲಿಸಿತು. ಮಲ್ಲಮಾಡ ತಂಡದ ಗುಲ್ಶನ್ ಗಣಪತಿ, ಕರುಂಬಯ್ಯ ಹಾಗೂ ಶನತ್ ಪೂಣಚ್ಚ ತಲಾ 1 ಗೋಲು ದಾಖಲಿಸಿದರೆ ಸಂದೇಶ್ ಬೆಳ್ಯಪ್ಪ 2 ಗೋಲು ಬಾರಿಸಿದರು. ಮಲ್ಲಜಿರ ತಂಡದ 2 ಗೋಲು ದಾಖಲಿಸಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

*ಮೈದಾನ ಸಂಖ್ಯೆ 3* 

ತೆನ್ನಿರಾ ಮತ್ತು ಕೆಳಪಂಡ ತಂಡಗಳ ನಡುವೆ ಪಂದ್ಯಾವಳಿ ನಡೆದಿದ್ದು, ಕೆಳಪಂಡ ತಂಡ ತೆನ್ನಿರಾ ತಂಡದ ವಿರುದ್ಧ 6 ಗೋಲು ದಾಖಲಿಸಿ ಜಯಗಳಿಸಿತು. ಕೇಳಪಡಂ ತಂಡದ ಶಿರಾಗ್ ತಮ್ಮಯ್ಯ ಹಾಗೂ ನಾಣಯ್ಯ ತಲಾ 3 ಗೋಲುಗಳನ್ನು ದಾಖಲಿಸಿದರು. ತೆನ್ನಿರಾ ಗಗನ್ ಬೋಪಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕೇಕಡ ಮತ್ತು ಮಾದಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಾದಂಡ ತಂಡ 4-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಮಾದಂಡ ತಂಡದ ಸಂದೇಶ್ ಅಪ್ಪಯ್ಯ 2, ಲಿಖಿತ್ ಅಪ್ಪಣ್ಣ ಹಾಗೂ ಮಿಲನ್ ಪೂಣಚ್ಚ ತಲಾ 1 ಗೋಲು ದಾಖಲಿಸಿದ್ದರು. ಕೇಕಡ ತರುಣ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಚಂಗುಲಂಡ ಮತ್ತು ಕಬ್ಬಚ್ಚಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಚಂಗುಲಂಡ ತಂಡ ಜಯ ಸಾಧಿಸಿತು. ಚಂಗುಲಂಡ ತಂಡದ ಈಶ್ ಅಯ್ಯಪ್ಪ, ಬೆನ್ ಬೊಪ್ಪಣ್ಣ ಹಾಗೂ ಗೌತಮ್ ತಲಾ 1 ಗೋಲು ದಾಖಲಿಸಿದರು. ಕಬ್ಬಚ್ಚಿರ ತಂಡದ ಪ್ರಜ್ವಲ್ 1 ಗೋಲು ದಾಖಲಿಸಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕೀತಿಯಂಡ ಮತ್ತು ಮೆಚಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಮೆಚಂಡ ತಂಡ 4-0 ಗೋಲುಗಳ ಅಂತರದಿಂದ ಗೆಲುವು ದಾಖಲಿಸಿತು. ಮೆಚಂಡ ತಂಡದ ಚಿರನ್ ಮೇದಪ್ಪ 3 ಹಾಗೂ ತನು ನಂಜಪ್ಪ 1 ಗೋಲು ದಾಖಲಿಸಿದರು. ಕೀತಿಯಂಡ ಶಶಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.

ಕೆಟೋಳಿರ ಮತ್ತು ವಾಟೇರಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ವಾಟೇರಿರ ತಂಡ 3-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ವಾಟೇರಿರ ತಂಡದ ಕಾರ್ತಿಕ್ ಕಾರ್ಯಪ್ಪ ಭರ್ಜರಿ 3 ಗೋಲು ದಾಖಲಿಸಿದರು. ಕೆಟೋಳಿರ ಮನೀಶ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕೊದೆಂಗಡ ಮತ್ತು ಕೆಚ್ಚೆಟೀರ (ಕಡಗದಾಳು) ತಂಡಗಳ ನಡುವಿನ ಪಂದ್ಯದಲ್ಲಿ ಕಿಚೇಟಿರ ತಂಡ 2-1 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಕೆಚ್ಚೆಟೀರ ತಂಡದ ವಿಜಯ್ ಉತ್ತಯ್ಯ ಹಾಗೂ ಮಿತುನ್ ತಲಾ 1 ಗೋಲು ದಾಖಲಿಸಿದರು. ಕೊದೆಂಗಡ ತಂಡದ ನಿತಿನ್ ಚಿಣ್ಣಪ್ಪ 1 ಗೋಲು ದಾಖಲಿಸಿದರು. ಕೊದೆಂಗಡ ತಂಡದ ದಿಲನ್ ಕಾವೇರಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 12 ರಂದು ಉದ್ಯೋಗ ಮೇಳ*

ಮೇ 9, 2026

*ಹುದ್ದೆಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 12 ರಂದು ಉದ್ಯೋಗ ಮೇಳ*

ಮೇ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮೇ 9 NEWS DESK  : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ…

*ಹುದ್ದೆಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ

ಮೇ 9, 2026

*ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*

ಮೇ 9, 2026

*ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*

ಮೇ 9, 2026

*ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*

ಮೇ 9, 2026

*ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*

ಮೇ 9, 2026

*ರಾಷ್ಟ್ರಮಟ್ಟದ ಸೆಸ್ಟೋಬಾಲ್ ಕ್ರೀಡೆ : ಮೊದಲ ಬಾರಿಗೆ ಚಿನ್ನ ಗೆದ್ದ ಕರ್ನಾಟಕ ತಂಡ : ಕೀರ್ತಿ ತಂದ ಕೊಡಗಿನ ಕ್ರೀಡಾಪಟುಗಳು*

ಮೇ 9, 2026

*ರಾಷ್ಟ್ರಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ : ಮಡಿಕೇರಿಯ ಅನ್ವಿತ್.ಎಸ್ ಚಾಂಪಿಯನ್*

ಮೇ 9, 2026

*ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ “ಕಲಾ ವೈಭವ” ಉದ್ಘಾಟನೆ : ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿ : ಮೇ.ಪ್ರೊ.ರಾಘವ ಬಿ. ಅಭಿಮತ*

ಮೇ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.