




ಸೋಮವಾರಪೇಟೆ ಏ.3 NEWS DESK : ಜೇಸಿಐ ಪುಷ್ಪಗಿರಿ ಸೋಮವಾರಪೇಟೆ ಮತ್ತು ಅಡ್ವೆಂಚರ್ ಡಾನ್ಸ್ ಸಂಸ್ಥೆಯ ಸಹಯೋಗದಲ್ಲಿ ಮೇಘನಾ ಡ್ರೈವಿಂಗ್ ಶಾಲಾ ಸಭಾಂಗಣದಲ್ಲಿ ನಡೆಯುವ ಒಂದು ತಿಂಗಳ ಬೇಸಿಗೆ ಶಿಬಿರಕ್ಕೆ ಜೇಸಿಐ ಅಧ್ಯಕ್ಷೆ ಜಗದಾಂಬ ಗುರುಪ್ರಸಾದ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಬೇಸಿಗೆ ಶಿಬಿರಗಳಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ತರಬೇತಿ ನೀಡುವುದರಿಂದ, ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿ ಹೆಚ್ಚಾಗುತ್ತದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಬಹುದಾಗಿದೆ. ನುರಿತ ಶಿಕ್ಷಕರಿಂದ ಕ್ರಾಪ್ಟ್, ಯೋಗ, ಕರಾಟೆ, ಚಿತ್ರಕಲೆ, ಗ್ಲಾಸ್ ಆರ್ಟ್ ಸೇರಿದಂತೆ ಹಲವಾರು ತರಗತಿಗಳು ನಡೆಯಲಿದೆ. ಶಿಬಿರದ ಪ್ರಯೋಜನವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೂನಿಯರ್ ಜೇಸಿ ಅಧ್ಯಕ್ಷೆ ದಿಶಾ ಗಿರೀಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಡ್ವೆಂಚರ್ ಡ್ಯಾನ್ಸ್ ಸಂಸ್ಥೆಯ ಚೇತನ್ ರವಿ, ವಲಯ ನಿರ್ದೇಶಕಿ ಮಾಯಾ ಗಿರೀಶ್ ಇದ್ದರು.