
*ಮೈದಾನ 1 : ಕುಪ್ಪಂಡ (ಕೈಕೇರಿ) ಮತ್ತು ನಾಗಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಕುಪ್ಪಂಡ ತಂಡ ಗೆಲುವು ದಾಖಲಿಸಿತು. ಕುಪ್ಪಂಡ ಪರ ಸೋಮಯ್ಯ 2, ನಾಚಪ್ಪ, ಚಂಗಪ್ಪ ಹಾಗೂ ದ್ಯಾನ್ ತಲಾ 1 ಗೋಲು ದಾಖಲಿಸಿದರು. ನಾಗಂಡ ಪರ ದೀಕ್ಷಿ ಸುಬ್ಬಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮತ್ರಂಡ ಮತ್ತು ಅಮ್ಮಂಡ ನಡುವಿನ ಪಂದ್ಯದಲ್ಲಿ 2 ತಂಡಗಳು ನಿಗದಿತ ಸಮಯದಲ್ಲಿ ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್ನಲ್ಲಿ 4-2 ಗೋಲುಗಳ ಅಂತರದಲ್ಲಿ ಮತ್ರಂಡ ಜಯ ಸಾಧಿಸಿತು. ಅಮ್ಮಂಡ ಕಾರ್ಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಅನ್ನಡಿಯಂಡ ಮತ್ತು ಪರದಂಡ ನಡುವಿನ ಪಂದ್ಯದಲ್ಲಿ 6-2 ಗೋಲುಗಳ ಅಂತದಲ್ಲಿ ಪರದಂಡ ಜಯ ಸಾಧಿಸಿತು. ಪರದಂಡ ಪರ ಕುಶಾಲಪ್ಪ ಹಾಗೂ ಅಯ್ಯಪ್ಪ ತಲಾ 2, ಉತ್ತಪ್ಪ ಹಾಗೂ ಪೂವಣ್ಣ ತಲಾ 1 ಗೋಲು ದಾಖಲಿಸಿದರು. ಅನ್ನಡಿಯಂಡ ಪರ ಪ್ರಕ್ಷಿತ್ ಪೊನ್ನಪ್ಪ ಹಾಗೂ ನವೀನ್ ನಾಚಪ್ಪ ತಲಾ 1 ಗೋಲು ದಾಖಲಿಸಿದರು. ಅನ್ನಡಿಯಂಡ ಪೊನ್ನಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಬೊಳ್ಳೇರ ಮತ್ತು ಮುಕ್ಕಾಟಿರ (ಬೋಂದ) ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಮುಕ್ಕಾಟಿರ ಗೆಲುವು ಸಾಧಿಸಿತು. ಮುಕ್ಕಾಟಿರ ಪರ ವಸಂತ್ 2, ಕರುಂಬಯ್ಯ ಹಾಗೂ ನಿಶಾಂತ್ ತಿಮ್ಮಯ್ಯ ತಲಾ 1 ಗೋಲು ದಾಖಲಿಸಿದರು. ಬೊಳ್ಳೇರ ರಕ್ಷಿತ್ ಮಂದಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಪಾಡೆಯಂಡ ಮತ್ತು ಐನಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಐನಂಡ ತಂಡ ಗೆಲುವು ದಾಖಲಿಸಿತು. ಐನಂಡ ಪರ ನಿರನ್ ಕುಶಾಲಪ್ಪ ಹ್ಯಾಟ್ರಿಕ್ ಗೋಲು ದಾಖಲಿಸಿದರೆ, ಆಕಾಶ್ ಪೂವಣ್ಣ ಹಾಗೂ ನ್ವಿನ್ ನಾಚಪ್ಪ ತಲಾ 1 ಗೋಲು ಬಾರಿಸಿದರು. ಪಾಡೆಯಂಡ ನಿಹಾರ್ ಮಂದಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
*ಮೈದಾನ 2 :: ನೆಲ್ಲಮಕ್ಕಡ ಮತ್ತು ಮುಕ್ಕಾಟಿರ (ಕಡಗದಾಳು) ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ನೆಲ್ಲಮಕ್ಕಡ ತಂಡ ಜಯ ಸಾಧಿಸಿತು. ನೆಲ್ಲಮಕ್ಕಡ ಪರ ಸಚಿನ್ 2, ವೃಕ್ಷಿತ್ ಸೋಮಯ್ಯ, ರೋಹನ್ ಬೋಪಣ್ಣ ಹಾಗೂ ಪ್ರತಿಕ್ ಪೂವಣ್ಣ ತಲಾ 1 ಗೋಲು ದಾಖಲಿಸಿದರು. ಮುಕ್ಕಾಟಿರ ಕಾವ್ಯ ದೇವಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕುಂಡ್ಯೋಳಂಡ ಮತ್ತು ನಾಪಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ನಾಪಂಡ ತಂಡ ಗೆಲುವು ಸಾಧಿಸಿತು. ನಾಪಂಡ ಪರ ಸೋನು ಸೋಮಣ್ಣ ಹಾಗೂ ಪ್ರವೀಣ್ ತಲಾ 1 ಗೋಲು ದಾಖಲಿಸಿದರು. ಕುಂಡ್ಯೋಳಂಡ ಬಿಪಿನ್ ಬೆಳ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೇಲೇಟಿರ ಮತ್ತು ಕೋಳೆರ ನಡುವೆ ನಡೆದ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ಕೋಳೆರ ತಂಡ ಗೆಲುವು ದಾಖಲಿಸಿತು. ಕೋಳೆರ ಪರ ವಿನಯ್ ನಾಣಯ್ಯ, ಅಯ್ಯಪ್ಪ ಹಾಗೂ ಮಿಲನ್ ಮಾಚಯ್ಯ ತಲಾ 1 ಗೋಲು ದಾಖಲಿಸಿದರು. ಕೇಲೇಟಿರ ಪರ ಮುತ್ತಣ್ಣ 2 ಗೋಲು ಬಾರಿಸಿ, ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚೆಕ್ಕೇರ ಮತ್ತು ಶಾಂತೆಯಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ನಿಗದಿತ ಅವಧಿಯಲ್ಲಿ ತಲಾ 1 ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್ನಲ್ಲಿ 3-1 ಗೋಲುಗಳ ಅಂತರದಲ್ಲಿ ಚೆಕ್ಕೇರ ಜಯ ಸಾಧಿಸಿತು. ಚೆಕ್ಕೇರ ಪರ ವರುಣ್ ಮಾದಪ್ಪ 1, ಶಾಂತೆಯಂಡ ಪರ ಬಿಪಿನ್ ಬೋಪಯ್ಯ 1 ಗೋಲು ದಾಖಲಿಸಿದರು. ಶಾಂತೆಯಂಡ ಅಭಿ ಉತ್ತಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೂತಂಡ ಮತ್ತು ಅಲ್ಲಪಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಕೂತಂಡ ತಂಡ ಗೆಲುವು ದಾಖಲಿಸಿತು. ಕೂತಂಡ ಪರ ಸಂತೋಷ್ ಮೇದಪ್ಪ 2 ಹಾಗೂ ಬೋಪಣ್ಣ 1 ಗೋಲು ದಾಖಲಿಸಿದರು. ಅಲ್ಲಪಂಡ ಗಿರಿ ಚೆಂಗಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕುಲ್ಲಚಂಡ ಮತ್ತು ಪೆಮ್ಮಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂಗತರದಲ್ಲಿ ಪೆಮ್ಮಂಡ ತಂಡ ಜಯ ಸಾಧಿಸಿತು. ಪೆಮ್ಮಂಡ ಪರ ಲವಿನ್ ಅಯ್ಯಪ್ಪ, ಸುಹಾಸ್ ಸೋಮಣ್ಣ ಹಾಗೂ ಸೋಮಣ್ಣ ಪಿ.ಎ.ತಲಾ 1 ಗೋಲು ದಾಖಲಿಸಿದರು. ಕುಲ್ಲಚಂಡ ಸುಜನ್ ಬೋಪಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.









