ನಾಪೋಕ್ಲು ಏ.19 NEWS DESK : ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ 25ನೇ ವರ್ಷದ ಮುದ್ದಂಡ ಕಪ್ 2025, ಹಾಕಿ ಪಂದ್ಯಾವಳಿಯಲ್ಲಿ ಹಲವರು ದಿನನಿತ್ಯ ಕಾರ್ಯನಿರ್ವಹಿಸಿ ಶ್ರಮಿಸುತ್ತಿದ್ದಾರೆ. ಇದರಲ್ಲಿ ವೀಕ್ಷಕ ವಿವರಣೆ ಕೊಡುವುದು ಸುಲಭದ ಮಾತಲ್ಲ. ಕ್ರೀಡೆಯ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರಬೇಕು ಮಾತ್ರವಲ್ಲದೆ ಎಲ್ಲವನ್ನು ಸರಿದೂಗಿಸಿಕೊಂಡು ಮುನ್ನಡೆಸುವ ಜಾಣ್ಮೆಯು ಅಷ್ಟೇ ಮುಖ್ಯವಾಗಿದೆ. ಹಾಕಿ ಪಂದ್ಯಾವಳಿಯಲ್ಲಿ ಈ ಕಾರ್ಯವನ್ನು ಖ್ಯಾತ ಕ್ರೀಡಾ ವೀಕ್ಷಕ (ವರದಿ) ವಿವರಣೆಗಾರೂ ಹಾಗೂ ಬರಹಗಾರರು ಆಗಿರುವ ಚೆಪ್ಪುಡೀರ ಕಾರ್ಯಪ್ಪ ಹಾಗೂ ಮಾಳೇಟಿರ ಶ್ರೀನಿವಾಸ್ ಇವರ ಜೊತೆ ಚೋಕಿರ ಅನಿತಾ, ಬೊಟ್ಟೋಳಂಡ ಸೌಮ್ಯ, ಮೂಡೆರ ಹರೀಶ್ ಕಾಳಯ್ಯ, ಕುಲ್ಲೇಟಿರ ಅರುಣ್ ಬೇಬ, ಅಜ್ಜೇಟಿರ ವಿಕ್ರಮ್ ಹಾಗೂ ಚೆಯ್ಯಂಡ ಬನಿತ್ ಬೋಜಣ್ಣ ಇವರನ್ನು ಒಳಗೊಂಡ ವೀಕ್ಷಕ ವಿವರಣೆ ತಂಡ ಮುದ್ದಂಡ ಹಾಕಿ ಹಬ್ಬದಲ್ಲಿ ಅದ್ಭುತವಾಗಿ ಕಾರ್ಯ ನಿರ್ವಹಿಸುವ ಮೂಲಕ ಜನ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವರದಿ : ದುಗ್ಗಳ ಸದಾನಂದ











