ಮಡಿಕೇರಿ ಮೇ 19 NEWS DESK : ಕೊಡಗು ಜಿಲ್ಲಾ ಕಿವುಡರ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಮೇ 25 ರಂದು ವಿರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಉಪಾಧ್ಯಕ್ಷ ಶಂಕರ ನಾರಾಯಣ, ಕೊಡಗು ಜಿಲ್ಲಾ ಕಿವುಡರ ಸಂಘದ ವತಿಯಿಂದ ಕೊಡಗು ಕಿವುಡ ಜಾಗೃತಿ ದಿನವನ್ನು ಆಚರಿಸಲು ನಿರ್ಧರಿಸಲಾಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ಹಣಕಾಸಿನ ನೆರವು ಅಗತ್ಯ ಇದೆ. ಅಂದಾಜು ವೆಚ್ಚ ರೂ.50,000 ಖರ್ಚಗುವ ಸಾಧ್ಯತೆ ಇದೆ ಆದ್ದರಿಂದ ಪ್ರಾಯೋಜಕತ್ವ ಅಥವಾ ದೇಣಿಗೆಯನ್ನು ಪಡೆಯಲು ನಿರ್ಧರಿಸಲಾಗಿದ್ದು, ಆಸಕ್ತರು “KODAGU DISTRICT DEAF ASSOCIATION” -Union Bank of India, SB ಖಾತೆ ಸಂಖ್ಯೆ 520101254608758, IFSC ಕೋಡ್ UBIN 0900087 ಸಹಕರಿಸುವಂತೆ ಮನವಿ ಮಾಡಿದರು. ಸಾರ್ವಜನಿಕರ ಕೊಡುಗೆಯು ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಮಾತ್ರವಲ್ಲದೆ ಕೊಡಗಿನಲ್ಲಿ ಕಿವುಡ ಸಮುದಾಯ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿಯೂ ನಮಗೆ ಸಹಾಯ ಮಾಡುತ್ತದೆ. ಸಂಘದ ಉದ್ದೇಶವನ್ನು ಬೆಂಬಲಿಸುವಂತೆ ಶಂಕರ ನಾರಾಯಣ ಕೋರಿದ್ದಾರೆ.











