
ಮಡಿಕೇರಿ ಜೂ.17 NEWS DESK : ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಜು.10 ರಂದು ಗುರು ಪೂರ್ಣಿಮಾ ಮಹೋತ್ಸವ ನಡೆಯಲಿದೆ. ಕುಶಾಲನಗರ ಗೌಡ ಸಮಾಜದಲ್ಲಿ ಸಂಜೆ.4.30 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮಹರ್ಷಿ ವ್ಯಾಸ ಮತ್ತು ಗುರುಪ್ರತಿಮೆಗಳ ಪೂಜೆ, ರಾಷ್ಟ್ರ ಮತ್ತು ಧರ್ಮಕಾರ್ಯ ಮಾಡುವವರ ಸತ್ಕಾರ ಸಂತರ ಸಂದೇಶ ಮತ್ತು ಕಾರ್ಯಕರ್ತರ ಅನುಭವಕಥನ, ಕಿರುಚಿತ್ರ ಹಾಗೂ ಸ್ವರಕ್ಷಣೆಯ ಪ್ರಾತ್ಯಕ್ಷಿಕೆಗಳು, ರಾಮರಾಜ್ಯ ಸ್ಥಾಪನೆಗಾಗಿ ಸಾಮೂಹಿಕ ನಾಮಜಪ, ಗಣ್ಯರಿಂದ ಮಾರ್ಗದರ್ಶನ ನಡೆಯಲಿದೆ ಎಂದು ಸಮಿತಿಯ ಪ್ರಮುಖರು ತಿಳಿಸಿದ್ದಾರೆ.










