ವಿರಾಜಪೇಟೆ ಜೂ.24 NEWS DESK : ವಿರಾಜಪೇಟೆ ಕೊಡವ ಸಮಾಜ ಮತ್ತು ಲೋಪಮುದ್ರ ದೃಷ್ಟಿ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು. ವಿರಾಜಪೇಟೆಯ ಕೊಡವ ಸಮಾಜದ ಸಭಾಂಗಣದಲ್ಲಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಲೋಪಮುದ್ರ ದೃಷ್ಟಿ ಆಸ್ಪತ್ರೆಯ ನೇತ್ರ ತಜ್ಞರಾದ ಡಾ.ಸೌಮ್ಯ ಗಣೇಶ್ ನಾಣಯ್ಯ, ಇಂದು ನಾವು ಕಣ್ಣಿನ ತೊಂದರೆ ಇರುವವರಿಗೆ ಸ್ಕ್ರೀನಿಂಗ್ ಟೆಸ್ಟ್ ಮಾಡುತ್ತಿದ್ದೇವೆ. ಹೆಚ್ಚಿನ ಜನರಿಗೆ ಕಣ್ಣಿನ ತೊಂದರೆಯ ಬಗ್ಗೆ ತಿಳಿದಿರುವುದಿಲ್ಲ. ಬಿಪಿ, ಶುಗರ್, ಇನ್ನಿತರ ಆರೋಗ್ಯ ಸಮಸ್ಯೆಗಳಿದ್ದರೆ ಕಣ್ಣಿಗೆ ಯಾವ ರೀತಿಯ ಪರಿಣಾಮಗಳಾಗುತ್ತದೆ ಎಂಬುವುದು ತಿಳಿದಿರುವುದಿಲ್ಲ. ಆದರಿಂದ ಸ್ಕ್ರೀನಿಂಗ್ ಟೆಸ್ಟ್ ಬಹಳ ಮುಖ್ಯವಾಗಿದ್ದು, ಸ್ಕ್ರಿನಿಂಗ್ ಟೆಸ್ಟ್ ಮಾಡಿ ಹೆಚ್ಚಿನ ಚಿಕೆತ್ಸೆಯ ಅವಶ್ಯಕತೆ ಇದ್ದರೆ ನಮ್ಮ ಮುಖ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತೇವೆ. ವಿರಾಜಪೇಟೆ ಕೊಡವ ಸಮಾಜ ಒಂದೊಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಹೇಳಿದರು. ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಎ.ಮನು ಕುಮಾರ್ ಮಾತನಾಡಿ, ವಿರಾಜಪೇಟೆ ಕೊಡವ ಸಮಾಜ ಮತ್ತು ಲೋಪಮುದ್ರ ದೃಷ್ಟಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಾಗಿರುವ ತಪಾಸಣಾ ಶಿಬಿರದ ಸದುಪಯೋಗಪಡಿಸಿಕೊಳ್ಳಲು ಆಗಮಿಸಿರುವುದು ಸಂತೋಷ ತಂದಿದೆ. ಎಲ್ಲರೂ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ಕೊಡವ ಸಮಾಜದ ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಮಾತನಾಡಿ, ಕೊಡವ ಸಮಾಜ ಆಡಳಿತ ಮಂಡಳಿಯ ತೀರ್ಮಾನದಂತೆ ಒಂದು ಉತ್ತಮ ಕೆಲಸಕ್ಕೆ ಮುಂದಾಗಿದ್ದೇವೆ. ಬಡ ಮತ್ತು ಮಧ್ಯಮ ಹಾಗೂ ಸಾರ್ವಜನಿಕರೆಲ್ಲರಿಗೆ ಉಪಯೋಗವಾಗಲಿ ಎಂಬ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಜಂಟಿ ಆಶ್ರಯದಲ್ಲಿ ಮಾಡುತ್ತಿದ್ದೇವೆ. ಲೋಪಮುದ್ರ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ.ಸೌಮ್ಯ ಗಣೇಶ್ ನಾಣಯ್ಯ ಹಾಗೂ ಅಮೃತ್ ನಾಣಯ್ಯ ಅವರ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ತ್ರಿವೇಣಿ ಶಾಲೆಯ ಆಡಳಿತ ಮಂಡಳಿಯ ಸದಸ್ಯ ಪುಟ್ಟಿಚಂಡ ನವೀನ್ ಮತ್ತು ಕೊಡವ ಸಮಾಜ ವಿರಾಜಪೇಟೆಯ ಆಡಳಿತ ಮಂಡಳಿಯ ಸದಸ್ಯರುಗಳು ಹಾಗೂ ಲೋಪ ಮುದ್ರಾ ದೃಷ್ಟಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಹಾಜರಿದ್ದರು.











