ಕುಶಾಲನಗರ ಜೂ.26 NEWS DESK : ಕಾವೇರಿ ನದಿ ಹರಿಯುವ ಕಣಿವೆ ತೂಗುಸೇತುವೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಪರಿಶೀಲಿಸಿದರು. ನಂತರ ರಂಗಸಮುದ್ರ ಬಳಿ ಸೇತುವೆಯ ಪಕ್ಕದಲ್ಲಿ ಮಳೆಯಿಂದ ಕುಸಿತವಾದ ಸ್ಥಳವನ್ನು ಪರಿವೀಕ್ಷಿಸಿ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭ ಶಾಸಕ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಲೋಕೋಪಯೋಗಿ, ನೀರಾವರಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.












