ಮಡಿಕೇರಿ ಜೂ.26 NEWS DESK : ಪೊನ್ನಂಪೇಟೆ ತಾಲ್ಲೂಕು ನಿಟ್ಟೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಣ್ಣನ ಹಾಡಿಯ ನೂತನ ಸೇತುವೆಯ ಬಳಿ ಮಣ್ಣು ಕುಸಿಯುತ್ತಿದೆ. ಕಳೆದ ಸಾಲಿನಲ್ಲಿ ಸುರಿದ ಧಾರಾಕಾರ ಮಳೆಗೆ ಇಲ್ಲಿನ ಹಳೆಯ ಸೇತುವೆ ಕೊಚ್ಚಿ ಹೋಗಿತ್ತು. ಸ್ಥಳೀಯರ ಒತ್ತಾಯದ ಹಿನ್ನೆಲೆ ಇತ್ತೀಚೆಗೆ ನೂತನ ಸೇತುವೆಯನ್ನು ನಿರ್ಮಿಸಲಾಯಿತು. ಆದರೆ ಈ ಸೇತುವೆಯ ಬಳಿ ತಡೆಗೋಡೆ ನಿರ್ಮಿಸದೆ ಇರುವುದರಿಂದ ಇದೀಗ ಮಣ್ಣು ಕುಸಿಯುತ್ತಿದೆ. ಇದರಿಂದ ಸೇತುವೆಗೆ ಮತ್ತು ರಸ್ತೆಗೆ ಹಾನಿಯಾಗಬಹುದೆಂದು ಹಾಡಿ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ವೈಜ್ಞಾನಿಕ ರೂಪದಲ್ಲಿ ತಡೆಗೋಡೆ ನಿರ್ಮಿಸಿದರೆ ಸಮಸ್ಯೆ ಬಗೆಹರಿಯಲಿದೆ ಎಂದು ಹಾಡಿ ಮುಖಂಡ ಮಾರ ಅಭಿಪ್ರಾಯಪಟ್ಟಿದ್ದಾರೆ.











