ಕುಶಾಲನಗರ NEWS DESK ಜೂ.28 : ಕುಶಾಲನಗರದ ಸೋಮೇಶ್ವರ ಬಡಾವಣೆ ನಿವಾಸಿ ಬಿ.ಎ.ನಾಗೇಗೌಡ (47) ಅವರು ಹೃದಯಾಘಾತದಿಂದ ಶನಿವಾರ ನಿಧನರಾದರು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತ ನಾಗೇಗೌಡರು ಕರ್ನಾಟಕ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷರಾಗಿದ್ದರು. ಜೇಸೀ ಕುಶಾಲನಗರ ಕಾವೇರಿಯ ಅಧ್ಯಕ್ಷರಾಗಿ, ಜೇಸೀ ಅಲ್ಯೂಮಿನಿ ಸಂಸ್ಥೆಯ ವಲಯ 14ರ ಉಪಾಧ್ಯಕ್ಷರಾಗಿ ಸಕ್ರಿಯರಾಗಿದ್ದರು. ಕುಶಾಲನಗರದ ನಾಢಪ್ರಭು ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕರು ಹಾಗೂ ತಾಲ್ಲೂಕು ಒಕ್ಕಲಿಗ ಸಂಘದ ಕಾರ್ಯದರ್ಶಿಯೂ ಆಗಿದ್ದರು. ಮೃತರ ನಿಧನಕ್ಕೆ ಕುಶಾಲನಗರದ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.










