ಕುಶಾಲನಗರ NEWS DESK ಜೂ.29 : ಕುಶಾಲನಗರ ತಾಲ್ಲೂಕಿನ ಮಳೆಹಾನಿ ಪ್ರದೇಶಗಳಿಗೆ ಮಡಿಕೇರಿ ಕ್ಷೇತ್ರದ ಶಾಶಕ ಡಾ.ಮಂತರ್ ಗೌಡ ಭೇಟಿ ನೀಡಿ ಪರಿಶೀಲಿಸಿದರು. ನೆಲ್ಲಿಹುದಿಕೇರಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಪ್ರವಾಹ ಪರಿಸ್ಥಿತಿಯ ಕುರಿತು ಅವಲೋಕಿಸಿ ಸ್ಥಳೀಯ ಜನಪ್ರತಿನಿಧಿಗಳಿಂದ ಮಾಹಿತಿ ಪಡೆದರು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಧನಲಕ್ಷ್ಮೀ, ಸದಸ್ಯರಾದ ಹಕೀಮ್, ಸಾಬು ವರ್ಗಿಸ್, ಅಶೋಕ್, ಅನಿಫಾ, ಮುಸ್ತಫ, ಶಫಿಯ, ಡಿಸಿಸಿ ಸದಸ್ಯರಾದ ಕೆ.ಎಂ.ಬಶೀರ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಭಾವ, ಕಾಂಗ್ರೆಸ್ ಮುಖಂಡರಾದ ಸಂಶು, ಅಬ್ದುಲ್ಲ, ಹಂಸ ಸಿ.ಎಂ ಮತ್ತಿತರರು ಹಾಜರಿದ್ದರು.







