ಮಡಿಕೇರಿ ಜೂ.30 NEWS DESK : ಜಾರ್ಖಂಡ್‍ನ ರಾಂಚಿಯಲ್ಲಿ ಜುಲೈ 3 ರಿಂದ 14ರ ತನಕ ಹಾಕಿ ಇಂಡಿಯಾ ವತಿಯಿಂದ ಜರುಗುತ್ತಿರುವ 15ನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಮಹಿಳಾ ಹಾಕಿ ಪಂದ್ಯಾವಳಿ 2025ರಲ್ಲಿ ಹಾಕಿ ಕರ್ನಾಟಕ ತಂಡವನ್ನು ಕೊಡಗಿನ 11 ಮಂದಿ ಪ್ರತಿನಿಧಿಸುತ್ತಿದ್ದಾರೆ.
ರಾಜ್ಯ ತಂಡವನ್ನು ಹಾಕಿ ಕರ್ನಾಟಕ ಪ್ರಕಟಿಸಿದ್ದು, ಒಟ್ಟು 20 ಮಂದಿಯ ತಂಡದಲ್ಲಿ 10 ಆಟಗಾರ್ತಿಯರು ಹಾಗೂ ತಂಡದ ವ್ಯವಸ್ಥಾಪಕರು ಕೊಡಗಿನವರಾಗಿರುವುದು ಜಿಲ್ಲೆಗೆ ಹೆಮ್ಮೆಯಾಗಿದೆ. ತಂಡದ ನಾಯಕಿಯಾಗಿ ಅಚ್ಚಪಂಡ ಪರ್ಲಿನ್ ಪೊನ್ನಮ್ಮ ತಂಡವನ್ನು ಮುನ್ನಡೆಸಲಿದ್ದಾರೆ. ಆಟಗಾರ್ತಿಯರಾಗಿ ಚೆಯ್ಯಂಡ ತ್ವಿಷಾ ದೇಚಮ್ಮ, ಬಾರಿಯಂಡ ಬೊಳ್ಳಮ್ಮ, ಚೇರಂಡ ನೀಲಮ್ಮ, ಕೀತಿಯಂಡ ಪೂರ್ವಿ ಪೂವಮ್ಮ, ಮಚ್ಚಾಮಾಡ ವಿದ್ಯಾ ಪೊನ್ನಮ್ಮ, ಪೊರ್ಕೋಂಡ ಗೀಷ್ಮ ಪೊನ್ನಮ್ಮ, ಚೌರೀರ ಧನ್ಯ ಕಾವೇಮ್ಮ, ಎಂ.ಎಲ್.ಕೃತಿಕಾ, ಹೆಚ್.ಎನ್.ಜೀವಿತಾ ಸ್ಥಾನ ಪಡೆದಿದ್ದಾರೆ. ತಂಡದ ವ್ಯವಸ್ಥಾಪಕರಾಗಿ ಕಂಬೀರಂಡ ರಾಖಿ ಪೂವಣ್ಣ ಕಾರ್ಯನಿರ್ವಹಿಸಲಿದ್ದಾರೆ.











