

ಮಡಿಕೇರಿ ಆ.15 NEWS DESK : ಪಾಲಿಬೆಟ್ಟ ಉಪ ಅಂಚೆ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಅಂಚೆ ಕಚೇರಿಯ ಉಪ ಪೋಸ್ಟ್ ಮಾಸ್ಟರ್ ಹೆಚ್.ಬಿ.ಗಣೇಶ್ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಯಂಗ್ ಇಂಡಿಯಾ ಕ್ಲಬ್‍ನ ಸಿ.ಎಂ.ಹ್ಯಾರಿಸ್, ಸಬ್ ಇನ್ಸ್‍ಪೆಕ್ಟರ್ ಮಂಜುನಾಥ್, ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಯಂಗ್ ಇಂಡಿಯಾ ಕ್ಲಬ್‍ನ ಸದಸ್ಯರು, ಅಂಚೆ ಕಚೇರಿ ಸಿಬ್ಬಂದಿಗಳು ಹಾಜರಿದ್ದರು.









